ಶಿರಾ ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯ್ತಿಯಲ್ಲಿ ಒಂದೇ ಕೆಲಸಕ್ಕೆ ಎರಡನೇ ಬಾರಿ ಬಿಲ್ ಮಾಡಿದ್ದು ಮೇಲ್ನೇಟಕ್ಕೆ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ.
ಶಿರಾ ತಾಲೂಕಿನ ಕುರುಬರಹಳ್ಳಿ ಗ್ರಾಮ ಪಂಚಾಯ್ತಿ ಶಾಗದಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ 2024-2025 ಸಾಲಿನಲ್ಲಿ ಅನುದಾನದಲ್ಲಿ ಸುಣ್ಣ ಬಣ್ಣ ಮತ್ತು ನೆಲಕ್ಕೆ ಕಲ್ಲುಗಳನ್ನು ಹಾಕಿಸಲಾಗಿತ್ತು. ಆದ್ರೆ ಗೋಡೆ ಬಿರುಕು, ಕಿಟಕಿ ಬಾಗಿಲು ಸರಿಯಾದ ರೀತಿಯಲ್ಲಿ ಇಲ್ಲದೇ ಮತ್ತು ಮುಖ್ಯದ್ವಾರದ ಬಾಗಿಲು ಬಿರುಕು ಕಾಣಿಸಿಕೊಂಡಿವೆ. ಅನುದಾನದಲ್ಲಿ ಸುಣ್ಣ, ಬಣ್ಣ ಬಳಿಯದೇ ಒಂದೇ ಕಾಮಗಾರಿಗೆ ಎರಡನೇ ಬಿಲ್ ಮಾಡಿಕೊಳ್ಳಲು ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರು ಮುಂದಾಗಿದ್ಧಾರೆ ಎಂದು ಗ್ರಾಮಸ್ಥರು ಆರೋಪ ಮಾಡ್ತಾ ಇದ್ದಾರೆ.
ಆಸ್ಪತ್ರೆಯ ಕಾಮಗಾರಿಯನ್ನು ಗ್ರಾಮಸ್ಥರು ಪರಿಶೀಲನೆ ನಡೆಸಿ ತಾಲೂಕು ಆಡಳಿತ ಕಚೇರಿಗೆ ಪತ್ರ ಬರೆದಿದ್ದು, ಕಾಮಗಾರಿಯ ಹಣ ದುರುಪಯೋಗ ಆಗಿರುವ ಬಗ್ಗೆ ಮಾಹಿತಿ ನೀಡಿದ್ದು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಆಗ್ರಹ ಮಾಡಿದ್ಧಾರೆ.