ಬೇಸಿಗೆ ಶುರುವಾಗ್ತಾ ಇದ್ದಂತೆ ಬೆಂಕಿ ದುರಂತಗಳು ಹೆಚ್ಚಾಗುವ ಸಾಧ್ಯತೆ ಇದೆ.. ಬೇಸಿಗೆ ಅರಂಭದಲ್ಲೇ ಅಲ್ಲಲ್ಲಿ ಬೆಂಕಿ ಅವಘಡಗಳು ಜರುಗುತ್ತಿದ್ದು ಆಕಸ್ಮಿಕ ಬೆಂಕಿಗೆ ಅಡಿಕೆ ಗಿಡಗಳು ಹಾಗೂ ತೆಂಗಿನ ಮರಗಳು ಸುಟ್ಟು ಕರಕಲಾಗಿವೆ. ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ಕುಂಬಾರಹಳ್ಳಿಯ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಕ್ಕೂ ಹೆಚ್ಚು ಅಡಿಕೆ ಗಿಡಗಳು, 150ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ನೀರಿನ ಪೈಪ್‌ಗಳು ಬೆಂಕಿಗಾಗುತಿಯಾಗಿವೆ.
ಗ್ರಾಮದ ಹನುಮಂತರಾಯಪ್ಪ ಎಂಬುವವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಅಡಿಕೆ ಹಾಗೂ ತೆಂಗಿನ ತೋಟ ಇದ್ದು, ಆಕಸ್ಮಿವಾಗಿ ಬೆಂಕಿಹೊತ್ತಿಕೊಂಡಿದೆ… ಬೆಂಕಿ ನಂದಿಸಲು ರೈತ ಸಾಕಷ್ಟು ಹರಸಾಹಸ ಪಟ್ಟರು ಯಾವುದೇ ಪ್ರಯೋಜನ ಆಗಲಿಲ್ಲ… ಬೆಂಕಿಯ ಕೆನ್ನಾಲಗೆ ವ್ಯಾಪಿಸಿದ್ದು ಸುಮಾರು ಸಾವಿರ ಅಡಿಗೆ ಗಿಡ ಹಾಗೂ 150 ತೆಂಗಿನ ತೋಟ ನಾಶವಾಗಿದೆ. ಬೆಳೆ ಕಳೆದುಕೊಂಡ ರೈತ ಹನುಮಂತರಾಯಪ್ಪ ಕಂಗಾಲಾಗಿದ್ದಾನೆ… ಸರ್ಕಾರ ಬೆಳೆ ನಾಶಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ರು. ಅಲ್ದೇ ಬೇಸಿಗೆ ಮುಗಿಯುವವರೆಗೂ ಬೆಂಕಿ ದುರಂತಗಳನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು.