SIRA- _ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು, ಅಧಿಕಾರಿಗಳ ವಿರುದ್ಧ ಆಕ್ರೋಶ

ಶಿರಾ ತಾಲೂಕಿನಲ್ಲಿ ಗುಂಡಿಗಳಿಂದ ನಾನಾ ಅವಾಂತರ ಸೃಷ್ಟಿ ಮಾಡ್ತಾ ಇದೆ, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ರು ಕೂಡ ಅಧಿಕಾರಿಗಳು ಮಾತ್ರ ಕೇರ್‌ ಮಾಡ್ತಾ ಇರಲಿಲ್ಲ.. ಈ ಮಧ್ಯೆ ಶಿರಾದಲ್ಲಿ ಘೋರ ದುರಂತ ಸಂಭವಿಸಿದ್ದು, ರಸ್ತೆಯ ಗುಂಡುಗೆ ಬಿದ್ದು ಬೈಕ್‌ ಸವಾರ ಸಾವನ್ನಪ್ಪಿದ್ದಾನೆ.

 ಶಿರಾ ಹಾಗೂ ಅಮರಪುರ ಮಧ್ಯೆ ಲಿಂಗದಹಳ್ಳಿ ಗೇಟ್‌ ಬಳಿ ಗುಂಡಿಗೆ ಬಿದ್ದು ಬೈಕ್‌ ಸವಾರ ಸಾವನ್ನಪ್ಪಿದ್ದಾನೆ. ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ರಾತ್ರಿ ವೇಳೆ ಎದುರಿಗೆ ಬರುವ ವಾಹನ ಲೈಟಿಗೆ ಗುಂಡಿಗಳು ಕಾಣದದೇ ಬೈಕ್‌ ಸವಾರ ಗುಂಡಿಗೆ ಬಿದ್ದಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ತೊಗರಿ ಕುಂಟೆ ಗ್ರಾಮದ ಮನೋಹರ್‌ ಎಂಬ ಯುವಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಶಿರಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.


ಇನ್ನು ಶಿರಾ ಹಾಗೂ ಅಮರಾಪುರ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರು ಒಂದೇ ಒಂದು ಸೂಚನ ಫಲಕಗಳನ್ನು ಕೂಡ ಅಳವಡಿಸಿಲ್ಲ,, ಇದ್ರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

Author:

share
No Reviews