ಸದ್ದಿಲ್ಲದೆ ಎಂಗೆಜ್‌ಮೆಂಟ್‌ ಮಾಡಿಕೊಂಡ ಗಾಯಕಿ ಐಶ್ವರ್ಯಾ ರಂಗರಾಜನ್‌

ಇತ್ತೀಚಿಗೆ ಹಲವು ಚಲನಚಿತ್ರ ನಟ ನಟಿಯರು ಸದ್ದಿಲ್ಲದೆ ಎಂಗೆಜ್‌ಮೆಂಟ್‌, ಮದುವೆ ಆಗುತ್ತಿದ್ದಾರೆ. ನಟ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾಗೆ ಶೆಕ್‌ ಇಟ್‌ ಪುಷ್ಪವತಿ ಸಾಂಗ್ ಹಾಡಿದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್‌ ಅವರು ಸದ್ದಿಲ್ಲದೆ  ಸರಳವಾಗಿ ಎಂಗೆಜ್‌ಮೆಂಟ್‌ ಮಾಡಿಕೊಂಡಿದ್ದಾರೆ.

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕನ್ನಡದ ಮೂಲಕ ಉತ್ತಮವಾಗಿ ಹಾಡುಗಳನ್ನು ಹಾಡುತ್ತಾಚಾಪು ಮೂಡಿಸಿದ್ದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಮಂಗಳೂರು ಹುಡುಗನ ಜೊತೆ ಸಿಂಪಲ್‌ ಆಗಿ ನಿಶಿತಾರ್ಥ ಮಾಡಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಐಶ್ವರ್ಯಾಗೆ ಅಭಿಮಾನಿಗಳು ಶೂಭ ಹಾರೈಸಿದ್ದಾರೆ. ಇನ್ನು ಐಶ್ವರ್ಯಾ ರಂಗರಾಜನ್ ಅವರು  ಕ್ರಾಂತಿ, ಯುಐ, ಕಬ್ಜ, ಏಕ್‌ ಲವ್‌ ಯಾ ಸಾಂಗ್ ಸೇರಿದಂತೆ ಹಲವು ಹಿಟ್ಸ್‌ ಸಾಂಗ್ಸ್‌ ಗಳನ್ನು ಹಾಡಿದ್ದಾರೆ.

ಕುಟುಂಬಸ್ಥರ ಸಮ್ಮಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರು ಐಶ್ವರ್ಯಾ ರಂಗರಾಜ್‌ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ನಿಶ್ಚಿತಾರ್ಥದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಫೋಟೋ ಕೆಳಗೆ ಬೆಂಗಳೂರು ಟು ಮಂಗಳೂರು ಪರ್ಫೆಕ್ಟ್‌ ಪಿಚ್‌ ಎಂದು ಬರೆದುಕೊಂಡಿದ್ದಾರೆ.
 

Author:

share
No Reviews