ಶಿರಾ:
ತ್ಯಾಜ್ಯದಿಂದ ತುಂಬಿಕೊಂಡಿರೋ ಕೆರೆ, ಹೂಳಿನಲ್ಲಿ ಬೆಳೆದು ನಿಂತಿರೋ ಜೊಂಡು, ಹಂದಿ ಮತ್ತು ನಾಯಿಗಳ ಹಾವಳಿ, ಕೊಳೆತ ತ್ಯಾಜ್ಯದ ದುರ್ನಾತದಿಂದ ಸೊಳ್ಳೆಗಳ ಕಾಟ,ಕೆರೆಯ ಸುತ್ತಲೂ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇವೆಲ್ಲಾ ಶಿರಾ ನಗರದ ಹೇಮಾವತಿ ಜಲಸಂಗ್ರಹದ ದೊಡ್ಡಕೆರೆಯ ದುಸ್ಥಿತಿ.
ಶಿರಾ ನಗರದ ಜನತೆಗೆ ನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡುವ ದೊಡ್ಡ ಕೆರೆ ಅಕ್ಷರಶಃ ಹೂಳಿನಿಂದ ತುಂಬಿಕೊಂಡಿದ್ದು, ತ್ಯಾಜ್ಯ ವಿಲೇವಾರಿ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕೆರೆಗೆ ಮನೆಯ ಕಸ, ಕೋಳಿ ಮಾಂಸದ ತ್ಯಾಜ್ಯವನ್ನು ಕೂಡ ಸುರಿದು ಹೋಗುತ್ತಿದ್ದು ಗಬ್ಬು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ. ಇದ್ರಿಂದ ಕೆರೆಯ ಬಳಿ ಸೊಳ್ಳೆ, ಹಂದಿಗಳ ಕಾಟ ಹೆಚ್ಚಾಗಿದೆ. ಜೊತೆಗೆ ಕೆರೆಯ ನೀರು ಕಲುಷಿತಗೊಂಡಿದ್ದು ದುರ್ವಾಸನೆ ಬೀರುತ್ತಿದೆ. ಜನರಲ್ಲಿ ರೋಗದ ಭೀತಿ ಹೆಚ್ಚಾಗಿದೆ.
ಇನ್ನು ಕೆರೆಯ ದಡಕ್ಕೆ ಹೊಂದಿಕೊಂಡಿರೋ ಕೆಲ ಬಡಾವಣೆ ನಾಗರೀಕರು ಕೆರೆಯ ಸುತ್ತಮುತ್ತಲಿನ ತಂತಿ ಬೇಲಿಯನ್ನು ಕಿತ್ತು ಹಾಕಿ, ಬಟ್ಟೆಯನ್ನು ತೋಳೆಯುತ್ತಿದ್ದರೂ ಕೂಡ ನಗರಸಭೆ ಅಧಿಕಾರಿಗಳು ಮಾತ್ರ ಕ್ಲೀನಿಂಗ್ ಮಾಡಿಸುವ ಕೆಲಸ ಮಾತ್ರ ಮಾಡ್ತಾ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆಯನ್ನು ಸ್ವಚ್ಛ ಮಾಡಿ ಜನರ ಆರೋಗ್ಯವನ್ನು ಕಾಪಾಡಬೇಕಿದೆ.