ಶಿರಾ :
ಬಿಸಿಲ ಬೇಗೆ ಹೆಚ್ಚಾಗ್ತಾ ಇದ್ದಂತೆ ಖಗೋಳ ವಿಸ್ಮಯವೊಂದು ನಡೆದಿದ್ದು, ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಮೂಕವಿಸ್ಮಿತರಾದರು. ಇಂದು ಮಧ್ಯಾಹ್ನ 12 ಗಂಟೆ 17 ನಿಮಿಷಕ್ಕೆ ಖಗೋಳದಲ್ಲಿ ವಿಸ್ಮಯ ಘಟಿಸಿದ್ದು, ಆ ವಿಸ್ಮಯಕ್ಕೆ ವಿದ್ಯಾರ್ಥಿಗಳು ಒಂದು ಕ್ಷಣ ಬೆರಗಾದರು. ಇಂದು ವಿಶ್ವ ಶೂನ್ಯ ನೆರಳು ಸಂಭವಿಸಿದ್ದು, ಖಗೋಳದಲ್ಲಿ ವಿಸ್ಮಯ ಜರುಗಿದೆ. ಮಧ್ಯಾಹ್ನ 12:17 ನಿಮಿಷಕ್ಕೆ ಸರಿಯಾಗಿ ಸೂರ್ಯ ನೇರವಾಗಿ ತಲೆಯ ಮೇಲಿರುವುದರಿಂದ ನಮ್ಮ ನೆರಳು, ನಮಗೆ ಕಾಣಿಸುವುದಿಲ್ಲ, ಈ ವಿಸ್ಮಯ ವರ್ಷಕ್ಕೆ ಎರಡು ಬಾರಿ ಸಂಭವಿಸಲಿದೆ. ಇಂದು ಶೂನ್ಯ ನೆರಳು ಸಂಭವಿಸಿದ್ದು ಈ ವಿಸ್ಮಯಕ್ಕೆ ಜನರು ಮೂಕವಿಸ್ಮಿತರಾಗಿದ್ದಾರೆ.
ಶಿರಾ ನಗರದ ಮಂಜುಶ್ರೀ ಶಾಲೆಯಲ್ಲಿ ಶೂನ್ಯ ನೆರಳನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಭಾಗಿಯಾಗಿದ್ದು ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ ಸಂಭವಿಸಿದ ಶೂನ್ಯ ನೆರಳು ಕಂಡು ಬೆರಗಾದರು. ಈ ಶೂನ್ಯ ನೆರಳು ವಿಸ್ಮಯ ಕರ್ಕಾಟಕ ವೃತ್ತ ಹಾಗೂ ಸಮಭಾಜಕ ವೃತ್ತದ ನಡುವಿನ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಅಂದು ಸೂರ್ಯ ನೇರವಾಗಿ ನಮ್ಮ ನೆತ್ತಿಯ ಮೇಲೆ ಬಂದಾಗ ಸಂಭವಿಸುತ್ತದೆ. ಆದ್ದರಿಂದ, ಆ ದಿನ ಭೂಮಿಯ ಮೇಲ್ಮೈಯಲ್ಲಿ ಯಾವುದೇ ಲಂಬ ವಸ್ತುವಿನ ನೆರಳನ್ನು ಕಾಣಲು ಸಾಧ್ಯವಿಲ್ಲ ಎಂದು ಶೈಕ್ಷಣಿಕ ಸಂಯೋಜಕ ಡಾಕ್ಟರ್ ಉಮೇಶ್ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದರು.
ಐದು ವರ್ಷಗಳಲ್ಲಿ ಎರಡು ಬಾರಿ ಶೂನ್ಯ ಸಂಭವಿಸಲಿದ್ದು ಇಂದು ಮತ್ತೆ. ಆಗಸ್ಟ್ 16ರಂದು ಈ ಖಗೋಳ ವಿಸ್ಮಯಕ್ಕೆ ಪ್ರಪಂಚ ಸಾಕ್ಷಿಯಾಗಲಿದೆ.