ಶಿರಾ: ಶಿರಾದ ಅಂಬಾ ಭವಾನಿ ಅಮ್ಮನವರ ದೇಗುಲದಲ್ಲಿ ಯದುವೀರ್ ವಿಶೇಷ ಪೂಜೆ

ಯದುವೀರ್‌ ಒಡೆಯರ್
ಯದುವೀರ್‌ ಒಡೆಯರ್
ತುಮಕೂರು

ಶಿರಾ:

ಶಿರಾದ ಶ್ರೀ ಅಂಬಾ ಭವಾನಿ ಅಮ್ಮನವರ ದೇವಾಲಯಕ್ಕೆ ಸಂಸದ, ಮೈಸೂರಿನ ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಈ ದೇವಾಲಯಕ್ಕೆ ಯದುವೀರ್‌ ಮೂರನೇ ಬಾರಿ ಭೇಟಿ ನೀಡ್ತಾ ಇದ್ದು, ಯದುವೀರ್‌ ಒಡೆಯರ್‌ಗೆ ಶಾಸಕ ಟಿ.ಬಿ ಜಯಚಂದ್ರ ಸೇರಿ ಹಲವಾರು ಮಂದಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಇನ್ನು ಯದುವೀರ್‌ ದೇಗುಲಕ್ಕೆ ಆಗಮಿಸುವ ಹಿನ್ನೆಲೆ ಅಂಬಾಭವಾನಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಮೈಸೂರು ಒಡೆಯರ್ ಯದುವೀರ್‌ ವಿವಾಹವಾದ ನಂತರ  ಶಿರಾ ನಗರದ ಅಂಬಾ ಭವಾನಿ ಅಮ್ಮನವರ ದೇವಾಲಯಕ್ಕೆ ಯದುವೀರ್‌ ಭೇಟಿ ನೀಡಿದರು. ನಂತರದಲ್ಲಿ ಮೊದಲ ಮಗು ಜನಿಸಿದ್ದ ವೇಳೆ ಬಂದಿದ್ದರು. ಇದೀಗ ಎರಡನೇ ಮಗು ಜನಸಿದ್ದ ಸಂತಸದಲ್ಲಿ ಮೂರನೇ ಬಾರಿ ಈ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಯದುವೀರ್‌ ದೇವಾಲಯಗಳನ್ನು ರಾಜ್ಯದ ಸಂಪತ್ತು ಎಂದು ಭಾವಿಸಲಾಗಿದೆ. ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿದ್ದು. ದೇವರ ದರ್ಶನವು ದೇಹ ಮತ್ತು ಮನಸ್ಸಿನಲ್ಲೊಂದು ಚೈತನ್ಯ ತುಂಬುತ್ತದೆ. ಆದರೆ, ದೇವಸ್ಥಾನದ ಭೇಟಿ ಬರೀ ಧಾರ್ಮಿಕ ಆಚರಣೆಯಲ್ಲ. ದೇವಾಲಯಗಳಿಗೆ ಹೋಗುವುದರಿಂದ ಅದು ನಮ್ಮನ್ನು ಆಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಲು ಸಹಾಯ ಮಾಡುತ್ತೆ ಎಂದರು.

Author:

...
Editor

ManyaSoft Admin

Ads in Post
share
No Reviews