ಶಿರಾ :
ಶಿರಾ ನಗರದ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ ಇದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗ್ತಾ ಇದೆ. ಈ ಹಿಂದೆ ಕೇಂದ್ರ ಸರ್ಕಾರದಿಂದ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಪಡೆದಿದ್ದ ಶಿರಾ ನಗರ ಇದೀಗ ಕಸದ ರಾಶಿಯಿಂದ ಸ್ವಚ್ಛ ನಗರ ಹಣೆಪಟ್ಟಿಯಿಂದ ಸರಿದಿದೆ. ಹೌದು ನಗರದ ಯೂನಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸುತ್ತಾಮುತ್ತ ಕಸದ ರಾಶಿ ತುಂಬಿದ್ದು, ಅಸ್ವಚ್ಛತೆ ತಾಂಡವ ಆಡ್ತಾ ಇದೆ. ನಗರವನ್ನೊಮ್ಮೆ ಸುತ್ತಾಡಿದರೆ ರಸ್ತೆ ಬದಿ, ಅಂಗಡಿ ಬದಿ ಹಾಗೂ ಖಾಲಿ ಜಾಗಗಳಲ್ಲಿ ಕಸದ ರಾಶಿಯ ದರ್ಶನವಾಗುತ್ತದೆ.
ಇದೀಷ್ಟಲ್ಲದೇ ಶಿರಾ ನಗರದ ಬಹುತೇಕ ವಾರ್ಡ್‌ಗಳ ಸ್ಥಿತಿಯೂ ಇದೆ ಆಗಿದೆ. ಕಸದ ಸಮಸ್ಯೆ ಹೆಚ್ಚಾಗಿರೋದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗ್ತಾ ಇದ್ದು, ಡೆಂಗ್ಯೂ ಮಲೇರಿಯಾದಂತಹ ರೋಗಗಳು ಜನರನ್ನು ಕಾಡಲಾರಂಭಿಸಿದೆ. ಕಸದ ಸಮಸ್ಯೆಗೆ ಕೇವಲ ನಗರಸಭೆ ಮಾತ್ರ ಕಾರಣವಾಗಲ್ಲ. ಬದಲಿಗೆ ನಿವಾಸಿಗಳು ಕೂಡ ಕಾರಣರಾಗ್ತಾರೆ. ಮನೆ ಮುಂದೆ ಕಸದ ಗಾಡಿ ಬಂದರೂ ಕೂಡ ಕಸ ಹಾಕದ ಜನರು ರಾತ್ರಿ ವೇಳೆ ರಸ್ತೆಗಳಲ್ಲಿ ಕಸವನ್ನು ಎಸೆದು ಹೋಗ್ತಾರೆ. ಇದರಿಂದ ಕಸದ ಸಮಸ್ಯೆ ಹೆಚ್ಚಾಗ್ತಾ ಇದ್ದು ಈ ಬಗ್ಗೆ ನಗರ ಸಭೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ.