ಶಿರಾ : ಶಿರಾ ಜನರಿಗೆ ಮಾರ್ಕೆಟ್ ಕೊರತೆ | ರಸ್ತೆ ಬದಿಯೇ ಇವರ ವ್ಯಾಪಾರ

ರಸ್ತೆಗಳಲ್ಲಿಯೇ ವ್ಯಾಪಾರ ಮಾಡುತ್ತಿರುವುದು.
ರಸ್ತೆಗಳಲ್ಲಿಯೇ ವ್ಯಾಪಾರ ಮಾಡುತ್ತಿರುವುದು.
ತುಮಕೂರು

ಶಿರಾ:

ಉತ್ತರ ಕರ್ನಾಟಕ ಮೂಲದ ಜಿಲ್ಲೆಗಳಿಗೆ ಹೋಗಬೇಕಂದರೆ ಶಿರಾ ನಗರದ ಮೂಲಕವೇ ಹಾದು ಹೋಗಬೇಕು. ಆದರೆ ಶಿರಾದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ನಗರಕ್ಕೆ ಸುಸಜ್ಜಿತವಾದ ಹಣ್ಣು- ತರಕಾರಿ, ಹೂವು ಮಾರಾಟ ಮಾಡಲು, ಖರೀದಿಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿಯೇ ಮಾರಾಟ ಮಾಡುವ ದುಸ್ಥಿತಿ ಇದೆ. ಇಲ್ಲಿ ಯಾರು ಎಲ್ಲಿ ಬೇಕಾದರೂ ರಸ್ತೆ ಮೇಲೆ ವ್ಯಾಪಾರ ಮಾಡಬಹುದು. ನಗರಸಭೆ ಅಂತೂ ಅವರ ಗೋಜಿಗೆ ಹೋಗೋದೆ ಇಲ್ಲ.

ನಗರದ KSRTC ಬಸ್‌ ನಿಲ್ದಾಣದ ಪಕ್ಕದ ರಸ್ತೆ ಅಕ್ಕಪಕ್ಕ ಸೇರಿದಂತೆ ನಗರದ ರಸ್ತೆಯ ಬದಿಯಲ್ಲಿ, ಪ್ರಮುಖ ಸರ್ಕಲ್‌ಗಳ ಮೇಲೆಯೇ ಕಿತ್ತಳೆ, ಕಲ್ಲಂಗಡಿ, ತರಕಾರಿ ವ್ಯಾಪಾರಿಗಳು ಇಟ್ಟುಕೊಂಡು ಹಾಗೂ ಟೆಂಪೋ, ಟಾಟಾ ಎಸ್‌ ವಾಹನಗಳನ್ನು ನಿಲ್ಲಿಸಿಕೊಂಡು ಮೈಕ್ ಹಾಕಿಕೊಂಡು ವ್ಯಾಪಾರ ಮಾಡ್ತಾ ಇದ್ದಾರೆ. ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಆಗ್ತಾ ಇದ್ದು, ನಿತ್ಯ ಅಪಘಾತಗಳಾಗುತ್ತಿವೆ. ಹೀಗಿದ್ದರೂ ಕೂಡ ನಗರಸಭೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

Author:

...
Editor

ManyaSoft Admin

Ads in Post
share
No Reviews