ಶಿರಾ ನಗರದ ರಸ್ತೆಗಳುತುಮಕೂರು
ಶಿರಾ :
ಶಿರಾ ನಗರ ದಿನದಿಂದ ದಿನಕ್ಕೆ ಹೆಚ್ಚು ಅಭಿವೃದ್ಧಿ ಆಗ್ತಾ ಇದೆ. ಆದರೆ ಈ ನಗರದ ಗುಂಡಿಗಳ ಅವಸ್ಥೆಯನ್ನು ನೋಡಿದರೆ ಇದೆನೋ ರಸ್ತೆನೋ, ಗುಂಡಿಗಳ ರಸ್ತೆನೋ ಒಂದು ಗೊತ್ತಾಗೋದಿಲ್ಲ. ಹೌದು ಶಿರಾ ನಗರದ ಮಧ್ಯಭಾಗದಲ್ಲಿರೋ ಪ್ರವಾಸಿ ಮಂದಿರ ವೃತ್ತದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸವಾರರು ಹೈರಾಣಾಗಿದ್ದಾರೆ. ಇನ್ನು ಈ ರಸ್ತೆ ಮೂರು ರಸ್ತೆಗಳನ್ನು ಸಂಧಿಸುವ ವೃತ್ತವಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದ ಕಾರಣ ವಾಹನ ದಟ್ಟಣೆ ಉಂಟಾಗಿ ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.
ನಗರದ ಪ್ರವಾಸಿ ಮಂದಿರದ ವೃತ್ತ, ಅಮರ ಪುರ ರಸ್ತೆ, ಹಿರಿಯರು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಈ ಭಾಗದಲ್ಲಿ ಸರ್ಕಾರಿ ಶಾಲಾ- ಕಾಲೇಜುಗಳು , ನಗರಸಭೆ, ತಾಲೂಕು ಕಚೇರಿ ಇದ್ದು ಇಲ್ಲಿ ಒಂದು ಸಿಗ್ನಲ್ ಕೂಡ ಇಲ್ಲ, ಜೊತೆಗೆ ರಸ್ತೆಗೆ ಹಾಕಿರೋ ಡಾಂಬರು ಕಿತ್ತು ಬಂದಿದ್ದು ಸಂಚಾರಕ್ಕೆ ಭಾರೀ ಅಡಚಣೆ ಆಗಿದೆ.
ಈ ರಸ್ತೆಯ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ತಾ ಇದ್ದಾರೆ, ಇದು ವೃತ್ತಕ್ಕೆ ಹೊಂದಿಕೊಂಡೇ ಇರುವುದರಿಂದ ಬಸ್ಗಳು ನಿಂತಾಗ ಹಿಂದಿನಿಂದ ಬರುವ ವಾಹನಗಳು ನಿಲ್ಲಬೇಕು ಅಥವಾ ಬಲ ಭಾಗದಿಂದ ಓವರ್ಟೇಕ್ ಮಾಡಬೇಕಾಗುತ್ತದೆ. ವೃತ್ತಕ್ಕೆ ಸ್ವಲ್ಪ ದೂರದಲ್ಲಿ ಬ್ಯಾಂಕ್ ಎಟಿಎಂ ಸಮೀಪದಲ್ಲೂ ಬಸ್ ಹತ್ತುವ ಮತ್ತು ಇಳಿಯುವ ಜನರು ಇರುತ್ತಾರೆ. ಇಲ್ಲಿ ಬಸ್ ತಂಗುದಾಣ ಇಲ್ಲ. ಆದರೂ ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕೆ ತೆರಳುವವರಿಗೆ ಇದುವೇ ಬಸ್ ಸ್ಟಾಪ್ಟ್ ಆಗಿದೆ ಇದರಿಂದ ಸಂಚಾರಕ್ಕೆ ಅಡಚಣೆ ಆಗಿದೆ, ಇಲ್ಲಿ ಸಂಚಾರ ನಿಯಂತ್ರಣಕ್ಕೆ ದೊಡ್ಡ ಸವಾಲೇನೂ ಇಲ್ಲ. ಸರಿಯಾಗಿ ನಿರ್ವಹಣೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ.