ಶಿರಾ: ಶಿರಾದಲ್ಲಿ ಅರ್ಥಪೂರ್ಣ ಸೇವಾಲಾಲ್ ಜಯಂತಿ ಆಚರಣೆ

ಶಿರಾದಲ್ಲಿ ಸೇವಾಲಾಲ್‌ ಜಯಂತಿ ಆಚರಣೆ ಮಾಡಲಾಯಿತು.
ಶಿರಾದಲ್ಲಿ ಸೇವಾಲಾಲ್‌ ಜಯಂತಿ ಆಚರಣೆ ಮಾಡಲಾಯಿತು.
ತುಮಕೂರು

ಶಿರಾ: 

ಶಿರಾದ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸೇವಾಲಾಲ್‌ ಜಯಂತಿ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಕೆ.ಎನ್.ಶೇಷನಾಯ್ಕ್, ತಹಸೀಲ್ದಾರ್ ಮೋಹನ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ಲಂಬಾಣಿ ಸಮಾಜದ ಮುಖಂಡರು, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷೆ ಚಂಪಕಮಾಲಾ, ನಗರ ಯೂತ್ ಕಾಂಗ್ರೆಸ್‌ ಅಧ್ಯಕ್ಷ ಅಂಜನ್ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜನಾಯಕ್‌, ತಮ್ಮ ಕಾಯಕವೆ ಕೈಲಾಸವೆಂಬಂತೆ ದುಡಿಯುವ ವರ್ಗವೆ ಬಂಜಾರ ಸಮುದಾಯ. ಈ ಕುಲದಲ್ಲಿ ಹುಟ್ಟಿರುವ ಸಂತ ಸೇವಾಲಾಲ್ ರವರು ಶ್ರೇಷ್ಠ ಸಂತರಾಗಿದ್ದಾರೆ ಅವರ ತತ್ವ ಆದರ್ಶಗಳು ಇಂದಿಗೂ ಆದರ್ಶನೀಯವಾಗಿವೆ ಎಂದರು. ಬಂಜಾರ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವಂತಹ ಆದರ್ಶ ಪುರುಷ ಸೇವಾಲಾಲ್ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗಳು ಇನ್ನಷ್ಟು ಸರಳ ರೀತಿಯಲ್ಲಿ ಉನ್ನತ ಮಟ್ಟದ ಸಂಶೋಧನೆಗಳನ್ನು ನಡೆಸಿ ಹೊರಹಾಕುವ ಮೂಲಕ ಸಮುದಾಯದ ಹಿನ್ನೆಲೆ ಬಗ್ಗೆ ತಿಳಿಸಿಕೊಡಬೇಕು ಎಂದರು.

Author:

...
Editor

ManyaSoft Admin

Ads in Post
share
No Reviews