ಶಿರಾ :
ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ. ಶಿರಾ ನಗರದ ಬಹುತೇಕ ವಾರ್ಡ್ ಗಳಲ್ಲಿ ಕಸದ ರಾಶಿ ತಾಂಡವ ಆಡ್ತಾ ಇದ್ದು, ರಸ್ತೆಯೇ ಕಸದ ಡಂಪಿಂಗ್ ಯಾರ್ಡ್ ರೀತಿ ಬದಲಾಗಿಬಿಟ್ಟಿದೆ, ಇದರಿಂದ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಇನ್ನು ಶಿರಾವನ್ನು ಕ್ಲೀನ್ ಸಿಟಿ ಮಾಡ್ತೀವಿ, ಗ್ರೀನ್ ಸಿಟಿ ಮಾಡ್ತೀವಿ ಅಂತಾರೆ ಆದರೆ ರಾಶಿ ರಾಶಿ ಕಸ ಬಿದ್ದಿದ್ದರು ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ ಅಂತ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಗರದ 24 ಮತ್ತು 25 ನೇ ವಾರ್ಡ್ ವ್ಯಾಪ್ತಿಗೊಳಪಡುವ ಮೆಕ್ಕಾ ರೈಸ್ ಮಿಲ್ ರಸ್ತೆಯಲ್ಲಿ ನಗರಸಭೆ ಆಡಳಿತದ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ಕಸದ ಕೊಂಪೆಯಾಗಿದೆ. ಈ ವಾರ್ಡ ಗಳಲ್ಲಿ ಸಮರ್ಪಕ ಕಸ ವಿಲೇವಾರಿ ಆಗದೇ ರಸ್ತೆ ಮೇಲೆಯೇ ಕಸ ಸುರಿತಿದ್ದು ರಸ್ತೆಯೇ ತಿಪ್ಪೆಯಾಗಿ ಪರಿವರ್ತನೆಯಾಗಿದ್ದು, ಇಡೀ ರಸ್ತೆ ಗಬ್ಬು ನಾರುತ್ತಿದೆ. ರಸ್ತೆಗಳಲ್ಲಿ ಅನೈರ್ಮಲ್ಯ ತಾಂಡವ ವಾಡ್ತಾ ಇದ್ದು ಜನರಿಗೆ ಕಿರಿಕಿರಿ ತಂದೊಡ್ತಿದೆ. ಅಲ್ಲದೇ ಇಲ್ಲಿ ಖಾಸಗೀ ಆಸ್ಪತ್ರೆಗಳಿದ್ದು, ರೋಗ ವಾಸಿಗೆಂದು ಬರುವವರಿಗೆ ಮತ್ತೇ ರೋಗ ಹೆಚ್ಚಾಗುವ ಭೀತಿ ಕಾಡ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ವಾಸಿಸ್ತಾ ಇದಾರೆ.
ನಗರದ ಕೆಲ ಏರಿಯಾಗಳಲ್ಲಿ ಕಸದ ಸಮಸ್ಯೆ ತಾಂಡವ ವಾಡ್ತಾ ಇದ್ರು, ಮತ ಪಡೆದ ಜನಪ್ರತಿನಿಧಿಗಳು ಮಾತ್ರ ಸೈಲೆಂಟ್ ಆಗಿದ್ದಾರೆ, ಇತ್ತ ಕಸ ಸಂಗ್ರಹಕ್ಕೆ ಬರೋ ಸಿಬ್ಬಂದಿ ಸರಿಯಾಗಿ ಕಸ ಸಂಗ್ರಹ ಮಾಡ್ತಿಲ್ಲ, ಆದ್ದರಿಂದ ಜನರು ಎಲ್ಲಿ ಬೇಕೊ ಅಲ್ಲಿ ಕಸ ಎಸೆದು ಹೋಗ್ತಿದ್ದಾರೆ, ಇನ್ನು ಈ ಬಗ್ಗೆ ನಗರಸಭೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಅಂತಿಲ್ಲ ಅಂತ ಸ್ಥಳೀಯರು ನಗರಸಭೆ ವಿರುದ್ದ ಅಕ್ರೋಶ ಹೊರ ಹಾಕ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ಸ್ವಚ್ಛತೆ ಬಗ್ಗೆ ಗಮನ ಹರಿಸ್ತಾರಾ ಎಂದು ಕಾದು ನೋಡಬೇಕಿದೆ.