ಶಿರಾ :
ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ, ಬದಲಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆ ಅನ್ನೋದನ್ನ ಸಾಬೀತು ಮಾಡ್ತಾನೆ ಬರ್ತಾ ಇದೆ. ತುಮಕೂರು ಜನರ ನಾಡಿಮಿಡಿತವಾಗಿ ನಿಮ್ಮ ಪ್ರಜಾಶಕ್ತಿ ಟಿವಿ ಕೆಲಸ ಮಾಡ್ತಾ ಇದ್ದು, ಹಳ್ಳಿ-ಹಳ್ಳಿಗಳ ಸಮಸ್ಯೆಗಳನ್ನು ಬಿತ್ತರಿಸುವ ಮೂಲಕ ಅಧಿಕಾರಿಗಳ ಗಮನವನ್ನು ಸೆಳೆಯುತ್ತಿದೆ, ಇದರಿಂದ ಜನರ ನಂಬಿಕೆ ವಿಶ್ವಾಸವನ್ನು ಗಳಿಸುತ್ತಿದೆ. ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ಚಂಗಾವರ ಗ್ರಾಮ ಪಂಚಾಯ್ತಿಯ ಪೌರ ಕಾರ್ಮಿಕರ ವೇತನವನ್ನು ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡಿತ್ತು. ಈ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಮಾಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರ ಗಮನವನ್ನು ಸೆಳೆದಿತ್ತು.
ಇನ್ನು ಪ್ರಜಾಶಕ್ತಿ ಟಿವಿಯಲ್ಲಿ ಸುದ್ದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಬಾಕಿ ಉಳಿಸಿಕೊಂಡಿದ್ದ ಮೂರು ತಿಂಗಳ ಪೌರ ಕಾರ್ಮಿಕರ ವೇತನವನ್ನು ಸೋಮವಾರದ ಒಳಗೆ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡಿದ್ದು, ದಿನಗೂಲಿ ಕೆಲಸದ ಆಧಾರದಲ್ಲಿ ಗ್ರಾಮ ಸ್ವಚ್ಚತೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಚಂಗಾವರ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಮೂಡಲಗಿರಿಯಪ್ಪ ಸ್ಪಷ್ಟಪಡಿಸಿದರು. ಅಲ್ಲದೇ ಗ್ರಾಮ ಪಂಚಾಯ್ತಿಗೆ ತೆರಿಗೆ ಪಾವತಿ ಬಾಕಿ ಕೆಲಸವನ್ನು ಎಲ್ಲಾ ಸದಸ್ಯರ ಮತ್ತು ಅಧಿಕಾರ ವರ್ಗದವರ ಸಹಕಾರದಿಂದ ಚಂಗಾವರ ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯ್ತಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಒಟ್ಟಿನಲ್ಲಿ ಪ್ರಜಾಶಕ್ತಿ ವರದಿಯಿಂದಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೌರಕಾರ್ಮಿಕರ ಬಾಕಿ ವೇತನ ಕೈಸೇರಿದ್ದು, ಪೌರಕಾರ್ಮಿಕರು ಪ್ರಜಾಶಕ್ತಿ ಟೀಂಗೆ ಅಭಿನಂದನೆ ಸಲ್ಲಿಸಿದ್ದಾರೆ.