ಶಿರಾ:
ದಿನೇ ದಿನೇ ಮೈಕ್ರೋ ಫೈನಾನ್ಸ್ಗಳ ಕಾಟ ಎಲ್ಲೆ ಮೀರಿದ್ದು, ಫೈನಾನ್ಸ್ದಾರರಿಗೆ ಮೂಗುದಾರ ಹಾಕಲು ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ, ಈ ಬೆನ್ನಲ್ಲೇ ಮೈಕ್ರೋ ಫೈನಾನ್ಸ್ದಾರರ ಜೊತೆ ಶಿರಾ ಇನ್ಸ್ಪೆಕ್ಟರ್ ಮಂಜೇಶ್ಗೌಡ ಸಭೆ ಮಾಡಿದರು. ಸಭೆಯಲ್ಲಿ ಶಿರಾ ನಗರದಲ್ಲಿರೋ ಎಲ್ಲಾ ಮೈಕ್ರೋ ಫೈನಾನ್ಸ್ ಮ್ಯಾನೇಜರ್, ಬಿಲ್ ಕಲೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಇನ್ಸ್ಪೆಕ್ಟರ್ ಮಂಜೇಶ್ ಗೌಡ, ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಆರ್ಬಿಐ ನಿರ್ದೇಶನದಂತೆ ನೋಂದಣಿ ಮಾಡಿಕೊಳ್ಳಬೇಕು. ಆರ್ಬಿಐ ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಗ್ರಾಹಕರಿಂದ ಪಡೆಯಬಾರದು. ಸಾಲ ನೀಡುವಾಗ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಅರ್ಹತೆ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಂಡು ಅಂತವರಿಗೆ ಸಾಲ ನೀಡಬೇಕು.
ಸಾಲಗಾರರಿಂದ ಸಾಲ ವಸೂಲಿ ಮಾಡಲು ಸಂಜೆ ಐದು ಗಂಟೆ ನಂತರ ಸಾಲಗಾರರ ಮನೆಗೆ ಹೋಗಬಾರದು. ಒಂದು ವೇಳೆ ಸಾಲಗಾರರಿಗೆ ಫೈನಾನ್ಸ್ಗಳಿಂದ ಅನವಶ್ಯಕ ಕಿರುಕುಳವಾಗುತ್ತಿದೆ ಅಂತ ದೂರು ಬಂದಲ್ಲಿ ಆಯಾ ಫೈನಾನ್ಸ್ನ ಪ್ರಮುಖರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.