ಶಿರಾ :
ಶಿರಾ ತಾಲೂಕಿನ ತಡಕಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಡಕಲೂರು ಪಾಳ್ಯ, ಎಂಜಿ ಪಾಳ್ಯ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಾಣವಾಗಿರೋ ಮನೆ ಮನೆಗೆ ಗಂಗೆ ನಳಸಂಪರ್ಕ ಕಾಮಗಾರಿಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭು ಜಿ ಅವರು ವೀಕ್ಷಿಸಿದರು. ಈ ವೇಳೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭು ಜಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಕುಡಿಯಲು ನೀರು, ಮತ್ತು ಸೂರಿನ ನೀಡುವ ಯೋಜನೆಗಳನ್ನು ರೂಪಿಸುತ್ತಿದ್ದು, ಅದರಲ್ಲಿಯೂ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ನೀಡುವ ಯೋಜನೆ ರೂಪಿಸಿದ್ದು, ತುಮಕೂರು ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದ್ರು. ಅಲ್ದೇ ಈ ಗ್ರಾಮದಲ್ಲಿ 130 ನಳಸಂಪರ್ಕ ಕಲ್ಪಿಸಲಾಗಿದೆ. ಮುಂಚೆ ಸಾರ್ವಜನಿಕ ನಳ ಸಂಪರ್ಕದ ಮೂಲಕ ಜನರು ಬೋರ್ವೆಲ್ ಹೊಡೆದು ನೀರು ತರುತ್ತಿದ್ರು, ಆದ್ರೆ ಈಗ ಆ ಸಮಸ್ಯೆ ಇಲ್ಲ, ಯಾಕೆಂದರೆ ಪ್ರತಿ ಮನೆಗಳಲ್ಲಿ ನಳ ಸಂಪರ್ಕ ನೀಡಿ ದಿನದ 24 ಗಂಟೆಯೂ ನೀರುಣಿಸುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ʼಮನೆ ಮನೆಗೆ ಗಂಗೆʼ ಎಂಬ ಧೈಯವಾಕ್ಯದಿಂದ ಮುನ್ನಡೆಸಲಾಗ್ತಿದೆ ಎಂದು ತಿಳಿಸಿದರು.