ಶಿರಾ : ಹೊನ್ನಗೊಂಡನಹಳ್ಳಿ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು...!

ಹೊನ್ನಗೊಂಡನಹಳ್ಳಿ ರಸ್ತೆ
ಹೊನ್ನಗೊಂಡನಹಳ್ಳಿ ರಸ್ತೆ
ತುಮಕೂರು

ಶಿರಾ:

ಕಾಲಿಟ್ಟರೇ ಸಾಕು ಬರೀ ಗುಂಡಿಗಳು, ಗರ್ಭೀಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿ ಹೆರಿಗೆ ಆಗೋದು ಫಿಕ್ಸ್‌. ಇನ್ನು ಈ ರಸ್ತೆಯಲ್ಲಿ ಹೋಗೋ ಸವಾರರ ಜೀವಕ್ಕೆ ಮಾತ್ರ ಗ್ಯಾರಂಟಿ ಇಲ್ಲ. ಅಷ್ಟಕ್ಕೂ ಇದು ಶಿರಾ ನಗರದಿಂದ ಆಂಧ್ರಪ್ರದೇಶದ ಗಡಿ ತಲುಪುವ ಹೊನ್ನಗೊಂಡನಹಳ್ಳಿ ರಸ್ತೆಯಾಗಿದೆ. ಶಿರಾ ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಇಂದಿಗೂ ಸಮಸ್ಯೆಯಾಗಿಯೇ ಉಳಿದಿವೆ. ಸರ್ಕಾರದಿಂದ ಪ್ರತಿವರ್ಷ ಹಣ ಮಂಜುರಾಗುತ್ತಲೇ ಇದ್ದರೂ ಹಳ್ಳಿ ರಸ್ತೆಗಳ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.

ಹೌದು ಶಿರಾ ನಗರದಿಂದ ಸುಮಾರು ಎಂಟು ಕಿಲೋಮೀಟರ್‌ ದೂರದಲ್ಲಿರುವ ಆಂಧ್ರ ಪ್ರದೇಶದ ಗಡಿ ತಲುಪುವ ಹೊನ್ನಗೊಂಡನಹಳ್ಳಿ ರಸ್ತೆ ಸಂಪೂರ್ಣ ಗುಂಡಿ ಮಯವಾಗಿದ್ದು, ಸವಾರರು ಮಾತ್ರ ಹೈರಾಣಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಅನುಪನಹಳ್ಳಿ, ದಾವೂದ್‌ ಪಾಳ್ಯ, ಮಾರ್ಗವಾಗಿ ಮದಲೂರು, ಗಿಡುಗನಹಳ್ಳಿ ಮತ್ತ್ ಆಂಧ್ರಪ್ರದೇಶದ ಗಡಿ ತಲುಪುವ ರಸ್ತೆಗಳಲ್ಲಿ ಡಾಂಬಾರು ಎದ್ದು ಜಲ್ಲಿ ಕಲ್ಲುಗಳು ಕಾಣುತ್ತವೆ. ಇನ್ನು ಈ ರಸ್ತೆಯಲ್ಲಿ ಗುಂಡಿಗಳಿರೋದರಿಂದ ಗಾಡಿಗಳು ವೇಗವಾಗಿ ಹೋದ್ರಂಥೂ ಧೂಳು ಏಳುತ್ತದೆ. ಈ ರಸ್ತೆಯಲ್ಲಿ ಮಣ್ಣು ಹೊರತು ಪಡಿಸಿದರೆ ಬೇರೆ ಯಾವ ಭಾಗ್ಯವೂ ಸಿಕ್ಕಿಲ್ಲ.

ಇನ್ನು ಈ ರಸ್ತೆಗೆ ಡಾಂಬಾರು ಹಾಕಿಲ್ಲ. ಇದರಿಂದಾಗಿ ಸವಾರರು ಓಡಾಡಲೂ ಸಾದ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ರಸ್ತೆ ನಿರ್ಮಾಣ ಕಾರ್ಯವು ದಿನದಿಂದ ದಿನಕ್ಕೆ ಸವಾಲು ಹುಟ್ಟು ಹಾಕುತ್ತಿರುವುದರ ನಡುವೆಯೇ ಈ ರಸ್ತೆಯಲ್ಲಿ ಓಡಾಡಲು ಸಂಕಷ್ಟ ಪಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

ಇಷ್ಟೆಲ್ಲಾ ಸಮಸ್ಯೆಯಿದ್ದರೂ ಯಾವೊಬ್ಬ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳೂತ್ತಿಲ್ಲ. ಈ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳು ಹಾದು ಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಮಳೆ ಬಂದರಂತೂ ಗುಂಡಿಗಳ ತುಂಬಾ ನೀರು ನಿಂತಿರುತ್ತವೆ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಿ ಅಪಘಾತ ತಪ್ಪಿಸಿ, ಸವಾರರ ಜೀವವನ್ನು ರಕ್ಷಣೆ ಮಾಡಬೇಕಿದೆ.

Author:

...
Editor

ManyaSoft Admin

Ads in Post
share
No Reviews