ಶಿರಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರತುಮಕೂರು
ಶಿರಾ :
ಶಿರಾ ನಗರದ ಸರ್ಕಾರಿ ಆಸ್ಪತ್ರೆ ರೋಗವನ್ನು ವಾಸಿ ಮಾಡಿಕೊಡೋದಲ್ಲ , ಕಾಯಿಲೆಗಳನ್ನು ಉತ್ಪತ್ತಿ ಮಾಡುವ ಕೇಂದ್ರವಾಗಿದೆ. ಹೌದು ನಗರದ 21ನೇ ವಾರ್ಡ್ನಲ್ಲಿರೋ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರ್ತಾ ಇದ್ದು, ಆಸ್ಪತ್ರೆ ಆವರಣ ಗಬ್ಬು ನಾರುತ್ತಿದೆ. ಸ್ವಚ್ಛತೆ ಅನ್ನೋದು ಮರಿಚೀಕೆಯಾಗಿದೆ. ಈ ಆಸ್ಪತ್ರೆಯಲ್ಲಿ ರೋಗಗಳು ಹೆಚ್ಚಾಗುತ್ತಿದ್ದರು ಕೂಡ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದೆ.
ಈ ಆಸ್ಪತ್ರೆಯಲ್ಲಿ ನಿರುಪಯುಕ್ತ ಔಷಧಿಗಳು, ಹಾಸಿಗೆ ದಿಂಬುಗಳು, ಕುರ್ಚಿ, ವೀಲ್ ಚೇರ್ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಇದರಿಂದ ಆಸ್ಪತ್ರೆಯಲ್ಲಿ ಸೊಳ್ಳೆಗಳ ಕಾಟ ಶುರುವಾಗಿದೆ. ಇದ್ರಿಂದ ರೋಗ ವಾಸಿಗೆಂದು ಬರುವ ರೋಗಿಗಳು ಮತ್ತಷ್ಟು ರೋಗವನ್ನು ಹೊತ್ತಿಸಿಕೊಂಡು ಹೋಗುವ ದುಸ್ಥಿತಿ ಎದುರಾಗಿದೆ. ಕಸದ ಜೊತೆಗೆ ಆಸ್ಪತ್ರೆ ಆವರಣದಲ್ಲಿ ಗಿಡಗಂಟಿಗಳು ಹೆಚ್ಚಾಗಿದ್ದು, ಹಾವುಗಳ ಕಾಟ ಹೆಚ್ಚಾಗಿದೆ ಎಂದು ಆಸ್ಪತ್ರೆಗೆ ಬರುವ ರೋಗಿಗಳು ಆರೋಪ ಮಾಡುತ್ತಿದ್ದಾರೆ.
ಈ ಆಸ್ಪತ್ರೆಗೆ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಂದ ರೋಗಿಗಳು ಪ್ರತಿನಿತ್ಯ ಬರುತ್ತಿದ್ದು, ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಹೆಚ್ಚಾಗಿದೆ ಎಂದು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.