ಶಿರಾ:
ಶಿರಾ ತಾಲೂಕಿನ ಗಡಿ ಗ್ರಾಮವಾದ ಚಿಕ್ಕ ಸಿಬಿಯಲ್ಲಿರೋ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು. ಮಾಘ ಮಾಸ ಪುಬ್ಬ ನಕ್ಷತ್ರದಲ್ಲಿ ಜರುಗಿದ ದೇವತಾ ಕಾರ್ಯದಲ್ಲಿ ಗರುಡ ದೇವ ರಥದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಿದ್ದಂತೆ ರಥವನ್ನು ಎಳೆಯುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಥ ಸಾಗುತ್ತಿದ್ದಂತೆ ಭಕ್ತರು ತಮ್ಮ ಕೈಯಲ್ಲಿದ್ದ ಬಾಳೆಹಣ್ಣು, ದವನ ಎಸೆದು ದೇವರ ಕೃಪೆಗೆ ಪಾತ್ರರಾದರು.
ರಥೋತ್ಸವಕ್ಕೂ ಮುನ್ನ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಹೋಮ- ಹವನ, ಪೂರ್ಣಾಹುತಿ ಮಾಡಲಾಯಿತು. ಬಳಿಕ ನರಸಿಂಹ ಸ್ವಾಮಿ ಮೂರ್ತಿಯನ್ನು ಮೆರವಣಿಗೆ ಮೂಲಕ ಬಂದು ರಥದಲ್ಲಿ ಕೂರಿಸಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಬಳಿಕ ರಥ ಸಾಗಿತು. ರಥೋತ್ಸವದಲ್ಲಿ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ ತಮಿಳುನಾಡು, ಮಹಾರಾಷ್ಟ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಸೀಬಿ ನರಸಿಂಹಸ್ವಾಮಿ ರಥೋತ್ಸವ ಸುಮಾರು ಒಂದು ವಾರಗಳ ಕಾಲ ಜರುಗಲಿದ್ದು, ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಭಕ್ತರ ದಂಡೇ ಹರಿದು ಬರ್ತಿದೆ. ಇನ್ನು ಇಂದು ರಥೋತ್ಸವದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಸುರೇಶ್ ಗೌಡ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.