ಶಿರಾ:
ಬೇಸಿಗೆ ಆರಂಭಕ್ಕೂ ಮುನ್ನವೇ ರಣ ಬಿಸಿಲಿನ ಜೊತೆ ನೀರಿನ ಅಭಾವ ಶುರುವಾಗಿದೆ. ಹನಿ ನೀರಿಗಾಗಿ ಕಿಲೋ ಮೀಟರ್ ಗಟ್ಟಲೆ ಅಲೆಯುವಂತ ದುಸ್ಥಿತಿ ಎದುರಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದರೂ ಕೂಡ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಶಿರಾ ತಾಲೂಕಿನ ಅಂದ್ರ ಪ್ರದೇಶಕ್ಕೆ ಹೊಂದಿಕೊಂಡಿರೋ ತಡಕಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಕರಿದಾಸರಹಳ್ಳಿಯ ಜನರಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಬಿಂದಿಗೆಗಳನ್ನು ಹಿಡಿದು ಕಿಲೋ ಮೀಟರ್ಗಟ್ಟಲೆ ಹೋಗುವ ಪರಿಸ್ಥಿತಿ ಇದೆ.
ಇನ್ನು ಈ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗಿರೋದು ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ಎಂದು ತಿಳಿದು ಬಂದಿದೆ. ಅಸಮರ್ಪಕ ಪೈಪ್ಲೈನ್ ಕಾಮಗಾರಿ ಮತ್ತು ನಿರ್ವಹಣೆ ಜೊತೆಗೆ, ಮೂರು ತಿಂಗಳ ಹಿಂದೆಯೇ ಮೋಟರ್ ಕೆಟ್ಟು ಹೋಗಿದ್ದು ಇನ್ನು ರಿಪೇರಿ ಮಾಡಿಸಿಲ್ಲ ಹೀಗಾಗಿ ಗ್ರಾಮದ ಜನರಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ.
ಮೋಟರ್ ಕೊಟ್ಟು ಮೂರು ತಿಂಗಳೇ ಕಳೆದಿದ್ದರೂ ರಿಪೇರಿ ಮಾಡಿಸುವ ಗೋಜಿಗೆ ಮಾತ್ರ ಹೋಗಿಲ್ಲ, ಅಲ್ಲದೇ ರಿಪೇರಿ ಮಾಡಿಸುವ ಲಕ್ಷಣವೂ ಕಾಣಿಸ್ತಾ ಇಲ್ಲ. ಹೀಗಾಗಿ ಬೆಳಗ್ಗೆ ಎದ್ದರೆ ಸಾಕು ಇಲ್ಲಿನ ಜನರಿಗೆ ನೀರು ತರುವುದೇ ದೊಡ್ಡ ಕೆಲಸವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮದ ಜನರಿಗೆ ಬೇಕಾದ ನೀರನ್ನು ಒದಗಿಸಿಕೊಡಬೇಕಿದೆ ಅನ್ನೋದು ಪ್ರಜಾಶಕ್ತಿಯ ಕಳಕಳಿ.