ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಬಹುತೇಕ ವಾರ್ಡ್‌ಗಳು

ಗಲ್ಲಿಗಳಲ್ಲಿ ಕಸ ಸುರಿದಿರುವುದು.
ಗಲ್ಲಿಗಳಲ್ಲಿ ಕಸ ಸುರಿದಿರುವುದು.
ತುಮಕೂರು

ಶಿರಾ :

ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು, ಅಭಿವೃದ್ದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಮಾರ್ಪಾಡಾಗಿದೆ ಶಿರಾ ನಗರ. ಹೌದು ನಗರದ ಬಹುತೇಕ ಬಡಾವಣೆಗಳಲ್ಲಿ ಕಸದ ರಾಶಿ ತಾಂಡವ ಆಡ್ತಾ ಇದ್ದು, ರಸ್ತೆಗಳು, ಚರಂಡಿಗಳು ಕಸದಿಂದ ತುಂಬಿ ಹೋಗಿದ್ದು, ಅಸ್ವಚ್ಚತೆ ತಾಂಡವ ವಾಡ್ತಾ ಇದೆ. ಇದ್ರಿಂದ ಇಡೀ ಏರಿಯಾನೇ ಗಬ್ಬೇದ್ದು ನಾರುತ್ತಿದ್ದು. ನಗರಸಭೆ ಕಸ ನಿರ್ವಹಣೆ ಸರಿಯಾಗಿ ಮಾಡದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಕ್ಕ ಪಕ್ಕದ ನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಗರದ 29 ನೇ ವಾರ್ಡ ವ್ಯಾಪ್ತಿಗೊಳಪಡುವ ಬಡಾವಣೆಗಳಲ್ಲಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ಕಸದ ಕೊಂಪೆಯಂತಾಗಿದೆ. ಈ ವಾರ್ಡ್‌ ಗಳಲ್ಲಿ ಸಮರ್ಪಕ ಕಸ ವಿಲೇವಾರಿ ಆಗದೇ ರಸ್ತೆ ಮೇಲೆಯೇ ಕಸ ಸುರಿತಿದ್ದು ರಸ್ತೆಯೇ ತಿಪ್ಪೆಯಾಗಿ ಪರಿವರ್ತನೆಯಾಗಿದ್ದು, ಕೊಳೆತು ಗಬ್ಬು ನಾರುತ್ತಿದೆ, ಊರಿನ ಸ್ವಚ್ಚತೆ ಬಗ್ಗೆ ಗಮನ ಹರಿಸಬೇಕಾದ ನಗರಸಭೆ ಮುಂಭಾಗವೇ ಕಸದ ತೊಟ್ಟಿ ತುಂಬಿ ತುಳುಕುತ್ತಿದೆ. ನಗರದ ಗಾಂದಿ ನಗರದ ನಿರ್ಮಲಾ ಆಸ್ಪತ್ರೆ ಎದುರಿನ ರಸ್ತೆಗಳು, ಗಲ್ಲಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಕಸ ವಿಲೇವಾರಿ ಘಟಕವೇನೂ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ ಅಂತ ಸ್ಥಳೀಯರು ಆರೋಪಿಸ್ತಾ ಇದಾರೆ.

ಇನ್ನು ಈ ರಸ್ತೆಯಲ್ಲೇ 3 ಕಸದ ಕಂಟೇನರ್‌ ಗಳನ್ನು ಇಟ್ಟಿದ್ದಾರೆ, ಆದ್ರೆ ಸಾರ್ವಜನಿಕರು ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ನಗರಸಭೆ ಆಟೋಗಳಿಗೆ ಹಾಕೋ ಬದಲು ಖಾಲಿ ಜಾಗದಲ್ಲಿ, ರಸ್ತೆಗಳ ಬಳಿ ಸುರಿದು ಹೋಗ್ತಿದ್ದಾರೆ. ಅಲ್ದೇ ಸೊಳ್ಳೆ ನಿಯಂತ್ರಣ ಯಂತ್ರವನ್ನ ಬಳಸದೇ ಇರೋದ್ರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ. ಇನ್ನು ನಗರಸಭೆ ಸದಸ್ಯರು ನಗರದ ಸ್ವಚ್ಛತೆ, ಜನರ ಆರೋಗ್ಯದ ಬಗ್ಗೆ ಗಮನ ಹರಿಸದೇ ಕ್ಲೀನ್‌ ಸಿಟಿಯನ್ನಾಗಿಸೋ ಬದಲು ಗಾಢನಿದ್ದೆಯಲ್ಲಿದ್ದು ಐತಿಹಾಸಿಕ ನಗರದ ಕನಸು ಕಾಣ್ತಿದ್ದಾರೆ ಅಂತ ಸಾರ್ವಜನಿಕರು ಹಿಡಿಶಾಪ ಹಾಕ್ತಿದ್ದಾರೆ.

ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೂ. ಕೂಡ ವಾರ್ಡ್ ಗಳತ್ತ ಸುಳಿತಿಲ್ಲ ಅಂತ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ರು. ಇನ್ನಾದ್ರು ನಗರಸಭೆ ಅಧಿಕಾರಿಗಳು ಎಚ್ಚೆತ್ತು ನಗರದ ವಾರ್ಡ್‌ಗಳಲ್ಲಿನ ಸಮಸ್ಯೆಗಳಿಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದುನೋಡಬೇಕಿದೆ.

Author:

...
Editor

ManyaSoft Admin

share
No Reviews