ತುಮಕೂರು: ಉಡುಗೊರೆಗೆ ಸೀಮಿತವಾಗದೇ ಜನರಿಗೆ ಉಪಯೋಗವಾಗುವಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ..!

ತುಮಕೂರು ಜಿಲ್ಲೆಯಲ್ಲಿ ಜೆಡಿಯು ಪ್ರವಾಸ ಕೈಗೊಂಡಿದ್ದು, ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು.
ತುಮಕೂರು ಜಿಲ್ಲೆಯಲ್ಲಿ ಜೆಡಿಯು ಪ್ರವಾಸ ಕೈಗೊಂಡಿದ್ದು, ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು.
ತುಮಕೂರು

ತುಮಕೂರು:

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಯುಕ್ತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ  ಜಿಲ್ಲೆಗಳಲ್ಲಿ ಜೆಡಿಯು ಪ್ರವಾಸ ಕೈಗೊಂಡಿದೆ. ಇಂದು ತುಮಕೂರು ಜಿಲ್ಲೆಯಲ್ಲಿ ಜೆಡಿಯು ಪ್ರವಾಸ ಕೈಗೊಂಡಿದ್ದು, ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಈ ವೇಳೆ ಜೆಡಿಯು ರಾಜ್ಯಾಧ್ಯಕ್ಷ  ಮಹಿಮ. ಜ. ಪಟೇಲ್ ಸೇರಿ ಹಲವಾರು ಮಂದಿ ಪಕ್ಷದ ಮುಂಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ  ಮಹಿಮ .ಜ. ಪಟೇಲ್ ನಾವು ಈಗಾಗಲೇ ಆಗ್ನೇಯ ಪದವೀಧರರ ಚುನಾವಣೆಗೆ ನಮ್ಮ ಪಕ್ಷದ  ಅಭ್ಯರ್ಥಿ ಡಾ. ನಾಗರಾಜ್ ಅವರನ್ನು‌ ಈಗಾಗಲೇ ಆಯ್ಕೆ ಮಾಡಿದ್ದೇವೆ. ಅದೇ ರೀತಿ ಬೇರೆ ಪಕ್ಷದವರು ಸಹ ಅಭ್ಯರ್ಥಿಗಳ ಅಯ್ಕೆ ಮಾಡಬೇಕಾದರೆ ಸ್ವಲ್ಪ ಯೋಚನೆ ಮಾಡಿ ಆಯ್ಕೆ ಮಾಡಿ. ನೀವು ಆಯ್ಕೆ ಮಾಡುವ ಅಭ್ಯರ್ಥಿಗಳು ಹಣ, ಹೆಂಡ, ಉಡುಗೊರೆಗಳಿಗೆ ಮಾತ್ರ ಸೀಮಿತವಾಗಬಾರದು ಬದಲಾಗಿ ಜನರಿಗೆ ಉಪಯೋಗವಾಗುವಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದರು.

ನಮ್ಮ ಪಕ್ಷದ ಅಭ್ಯರ್ಥಿಯನ್ನು ಹಣ ಹೆಂಡ ಉಡುಗೊರೆ ಕೊಡದೇ ನೈಜ್ಯ ರಾಜಕಾರಣ ಮಾಡಿ ಗೆಲ್ಲಿಸಬೇಕು ಅನ್ನುವುದೇ ನಮ್ಮ ಉದ್ದೇಶ ವಾಗಿದೆ ಎಂದು ಇದೇ ವೇಳೆ ಹೇಳಿದರು.

Author:

...
Editor

ManyaSoft Admin

share
No Reviews