Sandalwood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್‌ ಸಿನಿತಾರೆಯರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ ವುಡ್‌ ಜೋಡಿಗಳು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ ವುಡ್‌ ಜೋಡಿಗಳು
ಸಿನಿಮಾ-ಟಿವಿ

Sandalwood: ಇಂದು ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಂದು ಕಡೆ ʼಕ್ರೇಜಿ ಕ್ವೀನ್ʼ‌ ರಕ್ಷಿತಾ ಪ್ರೇಮ್‌ ಸಹೋದರ ರಾಣ ಮದುವೆ ನಡೆದಿದೆ. ಇನ್ನೊಂದು ಕಡೆ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಮದುವೆ ನಡೆದಿದೆ. ಚಿತ್ರರಂಗದವರೆಲ್ಲರೂ ಇಂದು ಈ ಎರಡು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟಿ ಜಯಮಾಲಾ ಪುತ್ರಿ ಸೌಂದರ್ಯ  ರುಷಬ್ ಕೆ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ದೂರಿ ಮದುವೆಯಲ್ಲಿ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ. 

ಜಯಮಾಲಾ ಅವರು ಚಿತ್ರರಂಗ ಹಾಗೂ ರಾಜಕೀಯದಲ್ಲಿ ತುಂಬ ಆಕ್ಟಿವ್‌ ಆಗಿದ್ದಾರೆ. ಹೀಗಾಗಿ ಅವರ ಮಗಳ ಮದುವೆಯಲ್ಲಿ ಗಣ್ಯರ ಸಮಾಗಮ ಆಗಿದೆ. ಈ ಮದುವೆಗೆ ಸಿಪಿ ಯೋಗೇಶ್ವರ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್‌ ದಂಪತಿ, ಸುಧಾರಾಣಿ, ಶ್ರೀನಾಥ್‌, ಅಂಬಿಕಾ, ಗಾಯತ್ರಿ ಅನಂತ್‌ನಾಗ್‌, ಹೊನ್ನವಳ್ಳಿ ಕೃಷ್ಣ, ಹೇಮಾ ಚೌಧರಿ, ರಾಕಿಂಗ್‌ ಸ್ಟಾರ್‌ ಯಶ್‌, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ಜನರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. 

ನಟಿ ರಕ್ಷಿತಾ ಅವರ ಸಹೋದರ ರಾಣಾ ಅವರು ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ʼಏಕ್‌ ಲವ್‌ ಯಾʼ ಸಿನಿಮಾದಲ್ಲಿ ನಟಿಸಿದ್ದ ರಾಣಾ ಈಗ ರಕ್ಷಿತಾ ಅವರ ಕೈಹಿಡಿದಿದ್ದಾರೆ. ರಾಣಾ ಮದುವೆಯಾಗಿರುವ ಹುಡುಗಿ ಹೆಸರು ಕೂಡ ರಕ್ಷಿತಾ ಎನ್ನೋದು ವಿಶೇಷ. ರಕ್ಷಿತ್‌ ಹಾಗೂ ರಾಣಾ ಇಬ್ಬರೂ ಪರಸ್ಪರ ಏಳು ವರ್ಷಗಳಿಂದ ಪ್ರೀತಿಸಿ ಸಪ್ತಪದಿ ತುಳಿದ ರಾಣಾ ಗುರು-ಹಿರಿಯರ ಆಶೀರ್ವಾದ ಪಡೆದುಕೊಂಡಿದ್ದಾರೆ.  ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ನಟಿ ರಕ್ಷಿತಾ ಪ್ರೇಮ್​ ಸಹೋದರ ರಾಣಾ ವಿವಾಹದ ಸಂಭ್ರಮದ ಕಳೆಗಟ್ಟಿದೆ. 

ಸ್ಯಾಂಡಲ್​ವುಡ್​ನ ನಟ-ನಟಿಯರು ಹರಸಿ-ಹಾರೈಸಿದ್ದಾರೆ. ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ದಂಪತಿ ಸಹೋದರನ ಮದುವೆಯನ್ನು ಅದ್ದೂರಿಯಾಗಿ ನಡೆಸಿಕೊಡುತ್ತಿದ್ದಾರೆ.ಈ ಮದುವೆಯಲ್ಲಿ ನಟ ಕಿಚ್ಚ ಸುದೀಪ್, ಅಭಿಷೇಕ್‌ ಅಂಬರೀಶ್, ಶ್ರೀಮುರಳಿ, ಚಿನ್ನೇಗೌಡ್ರು, ನಿಖಿಲ್‌ ದಂಪತಿ, ಶರ್ಮಿಳಾ ಮಾಂಡ್ರೆ, ಬಿವೈ ಯಜುವೇಂದ್ರ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಪ್ರಿಯಾಂಕಾ ಉಪೇಂದ್ರ, ರಮೇಶ್‌ ಅರವಿಂದ್‌, ಮಾಳವಿಕಾ ಅವಿನಾಶ್‌, ಗಣೇಶ್‌, ಅನು ಪ್ರಭಾಕರ್‌, ರಘು ಮುಖರ್ಜಿ, ಭಾರತಿ ವಿಷ್ಣುವರ್ಧನ್‌, ಅನಿರುದ್ಧ, ಸುಮಿತ್ರಾ, ಅಮೃತಾ ಅಯ್ಯಂಗಾರ್‌, ಸುಧಾರಾಣಿ, ಶ್ರುತಿ, ಯೋಗೇಶ್ವರ್ ಅವರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ನಟಿ ರಕ್ಷಿತಾ ಹಾಗೂ‌ ಜೋಗಿ ಪ್ರೇಮ್ ದಂಪತಿ ಬಂಗಾರದ ಬಣ್ಣದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಸರಳವಾಗಿ ಅರಿಷಿಣ, ಮೆಹೆಂದಿ ಕಾರ್ಯಕ್ರಮ ಮಾಡಲಾಗಿತ್ತು. 

 

Author:

...
Editor

ManyaSoft Admin

Ads in Post
share
No Reviews