Samantha : 38 ನೇ ವಸಂತಕ್ಕೆ ಕಾಲಿಟ್ಟ ನಟಿ ಸಮಂತಾ

Samantha :

ನಟಿ ಸಮಂತಾ ಇಂದು ತಮ್ಮ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಗೌತಮ್ ವಾಸುದೇವ್ ನಿರ್ದೇಶನದ ‘ವಿನ್ನೈತಾಂಡಿ ವರರುವಾಯಾ’ ಚಿತ್ರದ ಮೂಲಕ 2010ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಸಮಂತಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅದೇ ವರ್ಷ ರಿಲೀಸ್ ಆದ ‘ಯೇ ಮಾಯ ಚೇಸಾವೆ’ ಸಿನಿಮಾ ಕೂಟ ಸಮಂತಾ ವೃತ್ತಿ ಜೀವನವನ್ನೇ ಬದಲಿಸಿತು.

ಸದ್ಯ ಸಮಂತಾ ‘ರಕ್ತ ಬ್ರಹ್ಮಾಂಡ’ ಎಂಬ ವೆಬ್ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್, ವಮಿಕಾ ಗಬ್ಬಿ ಮೊದಲಾದವರು ನಟಿಸಿದ್ದು, ರಾಜ್ ಮತ್ತು ಡಿಕೆ ಇದನ್ನು ನಿರ್ದೇಶಿಸುತ್ತಿದ್ದಾರೆ. ಅಲ್ಲದೇ ಸಮಂತಾ  ‘ಮಾ ಇಂಟಿ ಬಂಗಾರಂ’ ಎಂಬ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಅವರೇ ನಿರ್ಮಾಪಕಿ ಕೂಡ ಅಗಿದ್ದಾರೆ.

ಇನ್ನು ಇತ್ತೀಚೆಗೆ ಸಮಂತಾ ಬಗ್ಗೆ ಕೆಲವು ಗಾಸಿಪ್‌ ಸಿನಿಮಾ ಇಂಡಸ್ಟ್ರೀಯಲ್ಲಿ ಹರಿದಾಡ್ತಿದೆ. ಹೌದು ಸಮಂತಾ ನಟ ನಾಗ ಚೈತನ್ಯ ಜೊತೆ ವಿಚ್ಚೇದನ ಪಡೆದ ಮೇಲೆ ನಿರ್ದೇಶಕ ರಾಜ್‌ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಅವರನ್ನೆ ಸಮಂತಾ ವಿವಾಹವಾಗ್ತಾರೆ ಎಂಬೆಲ್ಲ ಮಾತುಗಳು ಕೇಳಿ ಬಂದಿವೆ.

Author:

...
Sushmitha N

Copy Editor

prajashakthi tv

share
No Reviews