Salman Khan : ಸಲ್ಲುಗೆ ಮತ್ತೆ ಜೀವ ಬೆದರಿಕೆ ಬಂದಿದ್ದೆಲ್ಲಿಂದ..?

Actor Salman Khan : 

ಸಲ್ಮಾನ್ ಖಾನ್ ಬಾಲಿವುಡ್‌ ನ ಸೂಪರ್ ಸ್ಟಾರ್ ಬ್ಯಾಡ್ ಬಾಯ್ ಅಂತಲೇ ಫೇಮಸ್ ಆಗಿರೋ ನಟ. ಸಲ್ಲು ಮ್ಯಾನರಿಸಂಗೆ ಫಿದಾ ಆಗದವರೇ ಇಲ್ಲ. ಇನ್ನು ಈ ಸಲ್ಲುಮಿಯಾಗೆ ಕೇವಲ ಬಾಲಿವುಡ್‌ ನಲ್ಲಿ ಮಾತ್ರವಲ್ಲ.  ದೇಶ-ವಿದೇಶದಲ್ಲಿಯೂ ಅಭಿಮಾನಿಗಳಿದ್ದಾರೆ. ಸಲ್ಮಾನ್ ಖಾನ್ ಸಿನಿಮಾ ಬಂದರೆ ಸಾಕು ಹುಚ್ಚೆದ್ದು ಕುಣಿಯೋ ಡೈ ಹಾರ್ಡ್ ಪ್ಯಾನ್ಸ್ ಇದ್ದಾರೆ. ಒಂದು ರೀತಿ ಇಡೀ ಬಾಲಿವುಡ್ ಸಾಮ್ರಾಜ್ಯವನ್ನೇ ಆಳುತ್ತಿದ್ದ ಸಲ್ಮಾನ್ ಖಾನ್ ಇತ್ತೀಚೆಗೆ ಫುಲ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಸ್ವತಂತ್ರ ಹಕ್ಕಿಯಂತೆ ಮಸ್ತ್ ಮಸ್ತ್ ಓಡಾಡಿಕೊಂಡಿದ್ದ ಸಲ್ಮಾನ್ ಖಾನ್ ಇದೀಗ ಪಂಜರದ ಪಕ್ಷಿಯಾಗಿ ಬಿಟ್ಟಿದ್ದಾರೆ. ಕಾರಣ ಬಾಲಿವುಡ್ ಬ್ಯಾಡ್ ಬಾಯ್‌ ಗೆ  ಬಂದಿರೋ ಮತ್ತೊಂದು ಕೊಲೆ ಬೆದರಿಕೆ.

ಪದೇ ಪದೇ ಜೀವ ಬೆದರಿಕೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ ಗೆ ಇದೀಗ ಮತ್ತೊಂದು ಜೀವ ಬೆದರಿಕೆ ಬಂದಿದೆಯಂತೆ. 2024ರ ಏಪ್ರಿಲ್ನಲ್ಲಿ ಮುಂಬೈನ ಬಾಂದ್ರಾದಲ್ಲಿ ಇರುವ ಸಲ್ಮಾನ್ ಖಾನ್ ಒಡೆತನದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಬಳಿ ಇಬ್ಬರು ಆರೋಪಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಸಲ್ಮಾನ್ ಮನೆ ಸುತ್ತ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಅದಾದ ಒಂದು ವರ್ಷದ ಬಳಿಕ ಈಗ ಸಲ್ಮಾನ್‌ ಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆಯಂತೆ. ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಯ ವ್ಯಾಟ್ಸಾಪ್ ಸಂಖ್ಯೆಗೆ ಸಲ್ಮಾನ್ ಖಾನ್ ಅವರ ಮನೆಗೆ ನುಗ್ಗಿ ಅವರನ್ನು ಹತ್ಯೆ ಮಾಡ್ತೀವಿ, ಅವರ ಕಾರ್ ಗೆ ಬಾಂಬ್ ಇಟ್ಟು ಹಾಕ್ತೀವಿ ಎಂದು ಮೆಸೇಜ್ ಮಾಡಿ ಬೆದರಿಕೆ ಒಟ್ಟಿದ್ದಾರಂತೆ.

ಹಾಗಾದರೆ ಬೆದರಿಕೆ ಹಾಕುತ್ತಿರುವವರು  ಮೇಲ್ನೋಟಕ್ಕೆ ಬಿಷ್ನೋಯಿ ಗ್ಯಾಂಗ್ ನ ಕೆಲಸ ಅಂತಲೇ ಹೇಳಲಾಗ್ತಿದೆ. ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕಿ ಕೊಲೆಯನ್ನು ಮಾಡಿರೋದಾಗಿ ಈ ಬಿಷ್ನೋಯಿ ಗ್ಯಾಂಗ್ ಕ್ಲೇಮ್ ಮಾಡಿಕೊಂಡಿತ್ತು. ಲಾರೆನ್ಸ್ ಬಿಷ್ನೋಯಿ ಈ ಬಿಷ್ನೋಯಿ ಗ್ಯಾಂಗ್ ನ ಲೀಡರ್ . ಈತ ರಾಜಸ್ಥಾನದ ಬಿಷ್ಣೋಯಿ ಸಮುದಾಯಕ್ಕೆ ಸೇರಿದ್ದು ಇವರು ಕೃಷ್ಣ ಮೃಗವನ್ನು  ದೇವರು ಎಂದು ಪೂಜಿಸುತ್ತಾರೆ. ಹೀಗಾಗಿ 1998ರಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಈ ಬಿಷ್ನೋಯಿ ಗ್ಯಾಂಗ್ ಟಾರ್ಗೆಟ್ ಮಾಡಿದ್ಯಂತೆ.

ಸಲ್ಮಾನ್ ಖಾನ್ ಅವರು ಸಾರ್ವಜನಿಕವಾಗಿ ದೇವಾಲಯ ಒಂದಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸಬೇಕು ಅಥವಾ 5 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಬೇಕು ಎಂದು ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿತ್ತು. ಈ ಭೇಟೆಯನ್ನು ಖಂಡಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಲ್ಮಾನ್ ಪದೇ ಪದೇ ಜೀವ ಬೆದರಿಕೆಗಳನ್ನು ಎದುರಿಸುತ್ತಲೇ ಇದ್ದಾರೆ. ಇನ್ನು ದೇಶದಲ್ಲಿ ಬಲವಾದ ನೆಟ್ವರ್ಕ್ ಹೊಂದಿರುವ ಈ ಬಿಷ್ಣೋಯಿ ಗ್ಯಾಂಗ್ ನಿಂದ ಸಲ್ಮಾನ್ ಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗ್ತಿದೆ. ಇದು ಸಲ್ಮಾನ್ ಜೊತೆ ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿದೆ. ಅದಕ್ಕಾಗಿಯೇ ಅವರ ಬಾಂದ್ರಾ ಫ್ಲಾಟ್ ಗೆ ಗುಂಡು ನಿರೋಧಕ ಗಾಜಿನ ಫಲಕವನ್ನು ಅಳವಡಿಸಲಾಗಿದೆ. ಜೊತೆಗೆ ಬುಲೆಟ್ ಪ್ರೂಫ್ ಕಾರು, ಮನೆಯೊಂದಿಗೆ ಪಂಜರದ ಹಕ್ಕಿಯಂತಾಗಿದ್ದಾರೆ ಸಲ್ಮಾನ್ ಖಾನ್.

ಇನ್ನು, ಈ ಘಟನೆಯ ಬೆನ್ನಲ್ಲೇ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈನ ವರ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಬೆದರಿಕೆ ಸಂದೇಶದ ಮೂಲ ಮತ್ತು ಅದರ ನೈಜತೆ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.

Author:

...
Shabeer Pasha

Managing Director

prajashakthi tv

share
No Reviews