ರಷ್ಯಾ ಅಮೆರಿಕ ಭೇಟಿ | ಉಕ್ರೇನ್‌ ಗೆ ಶುರುವಾಯ್ತು ನಡುಕ

ಅಮೆರಿಕ ಪ್ರಧಾನಿ ಡೊನಾಲ್ಡ್‌ ಟ್ರಂಪ್ ಮತ್ತು ರಷ್ಯಾ‌ ಅಧ್ಯಕ್ಷ ಪುಟೀನ್
ಅಮೆರಿಕ ಪ್ರಧಾನಿ ಡೊನಾಲ್ಡ್‌ ಟ್ರಂಪ್ ಮತ್ತು ರಷ್ಯಾ‌ ಅಧ್ಯಕ್ಷ ಪುಟೀನ್
ಅಂತರರಾಷ್ಟ್ರೀಯ

ಅಮೆರಿಕ ಮತ್ತು ರಷ್ಯಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿದೆ. ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಟ್ರಂಪ್ ಬೆಂಬಲ ಸಿಕ್ಕಿದೆ ಎಂಬ ಆರೋಪ ಮಾಡಲಾಗುತ್ತಿದೆ. ಇಷ್ಟೆಲ್ಲದರ ನಡುವೆ ರಷ್ಯಾ & ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದ್ದು, ಉಕ್ರೇನ್ಗೆ ನಡುಕ ಶುರುವಾಗಿದೆ.

ರ‍ಷ್ಯಾ ಜೊತೆಗೆ ಅಮೆರಿಕದ ಅಧಿಕಾರಿಗಳು ಮಹತ್ವದ ಮಾತುಕತೆಯನ್ನು ಆರಂಭಿಸಿದ ನಂತರ ಟ್ರಂಪ್ ಸ್ಫೋಟಕ ಹೇಳಿಕೆ ನೀಡಿ ಉಕ್ರೇನ್ ವಿರುದ್ಧ ಗರಂ ಆಗಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ಅತ್ಯುತ್ತಮ ಸ್ನೇಹ ಇದೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಷ್ಯಾ ಪರವಾಗಿ ಹಲವು ನಿರ್ಧಾರ ಕೈಗೊಂಡಿದ್ದಾರೆ ಟ್ರಂಪ್. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮಾಡಲು ಖುದ್ದು ಉಕ್ರೇನ್ ಕಾರಣ ಎಂಬ ಆರೋಪ ಕೂಡ ಮಾಡಿದ್ದರು. ಇಂತಹ ಸಮಯದಲ್ಲೇ ದಿಢೀರ್ ರಷ್ಯಾ & ಅಮೆರಿಕ ನಡುವೆ ಮಹತ್ವದ ಮಾತುಕತೆ ನಡೆಯುತ್ತಿದೆ. ಹಾಗೇ ಈ ವೇಳೆ ಉಕ್ರೇನ್ ವಿರುದ್ಧ ಗರಂ ಆಗಿರುವ ಟ್ರಂಪ್, ಉಕ್ರೇನ್ ಅಧ್ಯಕ್ಷನ ಚಳಿ ಬಿಡಿಸಿದ್ದಾರೆ.

ಉಕ್ರೇನ್ ನ್ಯಾಟೋ ಒಕ್ಕೂಟ ಸೇರಲಿದೆ ಎಂಬ ಆರೋಪ ಹೊರಿಸಿ ರಷ್ಯಾ ಯುದ್ಧ ಸಾರಿತ್ತು. ರಷ್ಯಾ & ಉಕ್ರೇನ್ ಯುದ್ಧ ನೋಡುತ್ತಿದ್ದರೆ ಒಂದೊಂದು ಕ್ಷಣವೂ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧ ಪರಿಣಾಮ ನರಳಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ ಮಿಲಿಟರಿ ನೂರಾರು ಕ್ಷಿಪಣಿ ಪ್ರಯೋಗ ಮಾಡುತ್ತಿದೆ. ಹೀಗಿದ್ದಾಗ ಟ್ರಂಪ್ ಆಡಳಿತದ ಅಧಿಕಾರಿಗಳು ಪುಟಿನ್ ಸರ್ಕಾರದ ಜೊತೆಯಲ್ಲಿ ಮಹತ್ವದ ಮಾತುಕತೆ ಆರಂಭಿಸಿದ್ದಾರೆ.
 



 

Author:

...
Editor

ManyaSoft Admin

Ads in Post
share
No Reviews