ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಅಕ್ರಮ ಮರ ಸಾಗಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ಯಾ? ಹೀಗೊಂದು ಅನುಮಾನ ಮೂಡೋದಕ್ಕೆ ಶುರುವಾಗಿದೆ. ಟನ್ಗಟ್ಟಲೇ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದವರಿಗೆ ತುಮಕೂರು RTO ಆಧಿಕಾರಿಗಳು ಇದೀಗ ಶಾಕ್ ನೀಡಿದ್ದಾರೆ.
ಮರದ ದಿಮ್ಮಿಗಳನ್ನು ಓವರ್ ಲೋಡ್ ಮಾಡಿ ಸಾಗಿಸುತ್ತಿದ್ದ ಲಾರಿಗಳನ್ನು ತುಮಕೂರು RTO ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಮಡಿಕೇರಿಯಿಂದ ತುಮಕೂರಿಗೆ ಲಾರಿಗಳು ಮರದ ದಿಮ್ಮಿಗಳನ್ನು ಹೊತ್ತು ತರುತ್ತಿದ್ದವು. ರಾತ್ರಿ ಹೊತ್ತು ಲಾರಿಗಳು ಮರದ ದಿಮ್ಮಿಗಳನ್ನು ಹೊತ್ತು ಸಾಗಿಸುತ್ತಿದ್ದವು. ಈ ವೇಳೆ ಕಾರ್ಯಾಚರಣೆ ನಡೆಸಿದ ಆರ್ಟಿಓ ಅಧಿಕಾರಿಗಳು ಓವರ್ ಲೋಡ್ ಹಾಕಿಕೊಂಡು ಬರ್ತಿದ್ದ ಲಾರಿಗಳನ್ನು ಸೀಜ್ ಮಾಡಿದ್ದಾರೆ. ತುಮಕೂರಿನ ರಿಂಗ್ ರಸ್ತೆಯ ಬಳಿ ಬಂದಾಗ RTO ಸಿಬ್ಬಂದಿ ಲಾರಿಗಳನ್ನು ಸೀಜ್ ಮಾಡಿದ್ದಾರೆ. ಆರ್ಟಿಓ ಇನ್ಸ್ಪೆಕ್ಟರ್ ಷರೀಫ್ ನೇತೃತ್ವದಲ್ಲಿ ಎರಡು ಲಾರಿಗಳನ್ನು ಸೀಜ್ ಮಾಡಲಾಗಿದೆ.
ಒಂದು ಲಾರಿಯಲ್ಲಿ ೧೩ ಟನ್ ಓವರ್ ಲೋಡ್ ಹಾಕಲಾಗಿತ್ತು. ಇನ್ನೊಂದು ಲಾರಿಯಲ್ಲಿ ೧೧ ಟನ್ ಓವರ್ ಲೋಡ್ ಹಾಕಲಾಗಿತ್ತು. ಹೀಗಾಗಿ ಒಂದು ಲಾರಿಗೆ ೪೫ ಸಾವಿರ ರೂಪಾಯಿ ದಂಡ ಮತ್ತು ಇನ್ನೊಂದು ಲಾರಿಗೆ ೪೦ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಡುಪ್ಲಿಕೇಟ್ ಪರ್ಮಿಟ್ ಬಳಸಿ ಮರಗಳ ಸಾಗಣೆ ಮಾಡ್ತಿರೋ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಅಷ್ಟೇ ಅಲ್ಲ ತುಮಕೂರು ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿಯೂ ಮರಗಳ್ಳತನ ನಡೆಯುತ್ತಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯಾಕಂದರೆ ಆರ್ಟಿಓ ಅಧಿಕಾರಿಗಳು ಇತ್ತೀಚೆಗಷ್ಟೇ ಮರಸಾಗಣೆ ಮಾಡುತ್ತಿದ್ದ ಸ್ಥಳೀಯ ಟ್ರ್ಯಾಕ್ಟರ್ ಒಂದನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇಷ್ಟೆಲ್ಲಾ ಅಕ್ರಮ ಮರಸಾಗಣೆ ನಡೆಯುತ್ತಿದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ಮೇಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು, ರಾತ್ರಿ ಹೊತ್ತು ಕಾರ್ಯಾಚರಣೆ ನಡೆಸಿ ಈ ರೀತಿಯಾಗಿ ಅಕ್ರಮವಾಗಿ ಮರಸಾಗಣೆ ಮಾಡುವ ಮರಗಳ್ಳರಿಗೆ ಕಡಿವಾಣ ಹಾಕಬೇಕಿದೆ. ಆ ಮೂಲಕ ಜಿಲ್ಲೆಯಲ್ಲಿ ಉಳಿದಿರುವ ಅಲ್ಪಸ್ವಲ್ಪ ಅರಣ್ಯ ಸಂಪತ್ತನ್ನು ಉಳಿಸುವ ಕೆಲಸ ಮಾಡಬೇಕಿದೆ.