RAMANAGARA: ಮಂಗಳೂರು ಬೆನ್ನಲ್ಲೇ ರಾಮನಗರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ರಾಮನಗರ: 

ಹಾಡಹಗಲೇ ರೌಡಿಶೀಟರ್ವೊಬ್ಬನನ್ನು ಮಧ್ಯೆ ರಸ್ತೆಯಲ್ಲೇ ಲಾಂಗು ಹಾಗೂ ಮಚ್ಚಿನಿಂದ ಕೊಚ್ಚಿ, ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಬೆಂಗಳೂರಿನ ಕೋಣನಕುಂಟೆ ನಿವಾಸಿ ಸಂತೋಷ್ ಅಲಿಯಾಸ್ ಕರಡಿ (33) ಎಂದು ಗುರುತಿಸಲಾಗಿದೆ.


ಸಂತೋಷ್ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸಂತೋಷ್ ಸವಾರಿಯಾಗಿದ್ದ ಬೈಕ್‌ಗೆ ಗುದ್ದಿಸಿ ಆತನು ಕೆಳಗೆ ಬೀಳಿದ ಕೂಡಲೆ, ಲಾಂಗು ಮತ್ತು ಮಚ್ಚುಗಳಿಂದ ಥಳಿಸಿ ರಕ್ತದ ಮಡುಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ವೀಡಿಯೋ ಆಧರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. 

 

 

Author:

...
Keerthana J

Copy Editor

prajashakthi tv

share
No Reviews