ಬಾಲಿವುಡ್‌ನ ಖ್ಯಾತ ಗಾಯಕ, ರ‍್ಯಾಪರ್ ಹನಿ ಸಿಂಗ್ ನಿನ್ನೆ ಬೆಂಗಳೂರಿಗೆ ಆಗಮಿಸಿ ಅದ್ಧೂರಿಯಾಗಿ ಲೈವ್ ಕಾನ್ಸರ್ಟ್ (ಸಂಗೀತ ಕಾರ್ಯಕ್ರಮ) ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಸಾಥ್ ನೀಡಿದ್ದಾರೆ. ಅದಲ್ಲದೇ, ಹನಿ ಸಿಂಗ್‌ಗೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡಬೇಕು ಎಂದು ಯಶ್ ಬೇಡಿಕೆಯಿಟ್ಟಿದ್ದಾರೆ.
ಖ್ಯಾತ ರ್ಯಾಪರ್, ಗಾಯಕ ಹನಿಸಿಂಗ್ ಅವರ ಲೈವ್ ಕಾನ್ಸರ್ಟ್ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಿತು. ಕಾನ್ಸರ್ಟ್ನಲ್ಲಿ ಅತಿಥಿಯಾಗಿ ನಟ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ಈ ವೇಳೆ ಯಶ್ ಕೂಡ ವೇದಿಕೆಗೆ ಆಗಮಿಸಿ ಕನ್ನಡದಲ್ಲಿಯೇ ಹನಿ ಸಿಂಗ್‌ಗೆ ಬೆಂಗಳೂರಿಗೆ ಸ್ವಾಗತ ಎಂದಿದ್ದಾರೆ. ನಮಸ್ಕಾರ ಎಲ್ಲರೂ ಹೇಗಿದ್ದೀರಿ. ತುಂಬಾ ಖುಷಿ ಆಗುತ್ತಿದೆ ನಿಮ್ಮೆಲ್ಲರನ್ನೂ ನೋಡಿ. ನಮ್ಮ ಊರಿಗೆ ಬಂದ ಇವರಿಗೆ ಸ್ವಾಗತಿಸೋಣ, ವೆಲ್ ಕಮ್ ಬ್ರದರ್. ವಿ ಲವ್ ಯೂ ಎಂದು ಯಶ್ ಹೇಳಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ ರಿಲೀಸ್ ಮಾಡೋದಾಗಿ ಗುಡ್ ನ್ಯೂಸ್ ನೀಡಿದ್ದಾರೆ. ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಬಿಡುಗಡೆಯ ಡೇಟ್ ಅನೌನ್ಸ್ ಮಾಡಿದ್ದರು. ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ ಮಾರ್ಚ್ 19, 2026ರಂದು ಬಿಡುಗಡೆಯಾಗಲಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ 19-03-2026ರಂದು ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಯಶ್ ಘೋಷಿಸಿದರು. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ.