Rishab Shetty:
ಸ್ಯಾಂಡಲ್ವುಡ್ ಸ್ಟಾರ್ ನಟ ಸಮುದ್ರದ ತೀರದಲ್ಲಿ ಪತ್ನಿ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಹೌದು. ಕನ್ನಡದ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಅದು ಕೂಡ ಸಮುದ್ರದ ದಡದಲ್ಲಿ ಕ್ಯೂಟ್ ಕುಟುಂಬ ಕಾಣಿಸಿಕೊಂಡಿದೆ.
ಇನ್ನು, ವಿವಾಹ ವಾರ್ಷಿಕೋತ್ಸದ ಅಂಗವಾಗಿ ಕಡಲ ತೀರದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದೆ. ಅಲ್ಲದೇ ಬ್ಯೂಟಿಫುಲ್ ಲೊಕೇಶನ್ ಅಲ್ಲಿ ರಿಷಬ್ ದಂಪತಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸ್ಪೆಷಲ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋದಲ್ಲಿ ಪ್ರಗತಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಆಕರ್ಷಕವಾದ ಬಿಳಿ ಬಣ್ಣದ ಮೇಲೆ ಕೆಂಪು ಬಣ್ಣದ ಹಾರ್ಟ್ ಇರೋ ಕೇಕ್ ಕಟ್ ಮಾಡೋದನ್ನು ಕಾಣಬಹುದು. ಪ್ರಗತಿ ಮಗಳನ್ನು ಎತ್ತಿಕೊಂಡಿದ್ದರೆ ರಿಷಬ್ ಮಗನನ್ನು ಹಿಡಿದುಕೊಂಡಿದ್ದರು. ಎಲ್ಲರೂ ಗಾಗಲ್ಸ್ ಧರಿಸಿಕೊಂಡು ಸೂಪರ್ ಕ್ಯೂಟ್ ಆಗಿ ಕಾಣಿಸಿದ್ದಾರೆ.