ಚಿಕನ್ ಲಾಲಿಪಾಪ್ ಮಾಡಲು ಬೇಕಾಗುವ ಸಾಮಗ್ರಿಗಳು
ಚಿಕನ್ – 1KG
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
1 ಹಸಿ ಮೆಣಸಿನಕಾಯಿ
ಪೆಪ್ಪರ್ ಪೌಡರ್ - 2 ಚಮಚ
ಗರಂ ಮಾಸಾಲಾ – 1 ಚಮಚ
ಸ್ವಲ್ಪ ಕೊತ್ತಮರಿ ಸೊಪ್ಪು
ಸೋಯಾ ಸಾಸ್ – 2 ಚಮಚ
ವಿನಿಗರ್ – 2 ಚಮಚ
ರೆಡ್ ಚಿಲ್ಲಿ ಸಾಸ್ – 1 ಚಮಚ
ಫುಡ್ ಕಲರ್ ಸ್ವಲ್ಪ
1 ಮೊಟ್ಟೆಯ ಬಿಳಿ ಭಾಗ
ಕಾಲು ಕಪ್ ಕಾರ್ನ್‌ಪ್ಲೋರ್
ಮೈದಾ ಹಿಟ್ಟು 1 ಚಮಚ
ಚಿಕನ್ ಲಾಲಿಪಾಪ್ ಮಾಡುವ ವಿಧಾನ :
ಒಂದು ಬೌಲ್‌ನಲ್ಲಿ 1 KG ಚಿಕನ್, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಟ್ ಮಾಡಿರುವ 1 ಹಸಿ ಮೆಣಸಿನಕಾಯಿ, ಪೆಪ್ಪರ್ ಪೌಡರ್ 2 ಚಮಚ, ಗರಂ ಮಾಸಾಲಾ 1 ಚಮಚ, ಸ್ವಲ್ಪ ಕೊತ್ತಮರಿ ಸೊಪ್ಪು, ಸೋಯಾ ಸಾಸ್ 2 ಚಮಚ, ವಿನಿಗರ್ 2 ಚಮಚ, ರೆಡ್ ಚಿಲ್ಲಿ ಸಾಸ್ 1 ಚಮಚ, ಫುಡ್ ಕಲರ್ ಸ್ವಲ್ಪ,1 ಮೊಟ್ಟೆಯ ಬಿಳಿ ಭಾಗ, ಕಾಲು ಕಪ್ ಕಾರ್ನ್‌ಪ್ಲೋರ್, ಮೈದಾ ಹಿಟ್ಟು 1 ಚಮಚ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ 1 ಚಮಚ ಮೆಣಸಿನಕಾಯಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಫ್ರಿಡ್ಜ್ ನಲ್ಲಿ 1 ಗಂಟೆಗಳ ಕಾಲ ಇಡಿ.
ನಂತರ ಗ್ಯಾಸ್ ಹಚ್ಚಿ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಬೇಕು. ಎಣ್ಣೆಯನ್ನು ಚೆನ್ನಾಗಿ ಕಾಯಲು ಸ್ವಲ್ಪ ಸಮಯದವರೆಗೆ ದೊಡ್ಡ ಉರಿಯಲ್ಲಿ ಬಿಡಬೇಕು. ಎಣ್ಣೆ ಕಾದ ನಂತರ ಇದಕ್ಕೆ ಈಗಾಗಲೇ ಮಸಾಲೆಯಲ್ಲಿ ನೆನೆದ ಚಿಕನ್ ಪೀಸ್ ಗಳನ್ನು ಹಾಕಿ ಎಣ್ಣೆಯಲ್ಲಿ ಬಿಟ್ಟು ಕಡುಗೆಂಪು ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಚಿಕನ್ ಲಾಲಿಪಪ್ ರೆಡಿ.