ಕ್ರಿಕೆಟ್:
ಐಪಿಎಲ್ 18ನೇ ಆವೃತ್ತಿಯ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣೆಸಾಡಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಕಳೆದ ಬಾರಿಯ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ, ರಾಜಸ್ಥಾನ್ ರಾಯಲ್ಸ್ ತಂಡವನ್ನ ಅವರದ್ದೇ ತವರಿನಲ್ಲಿ ನುಗ್ಗಿ ಹೊಡೆದಿತ್ತು. ಹೀಗಾಗಿ ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಜೈಪುರದ ಹುಡುಗರಿದ್ದಾರೆ.
ಇನ್ನು ಆರ್‌ಸಿಬಿ ಈ ಬಾರಿ ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳನ್ನ ಸೋತಿದ್ದು, ಆರ್‌ಸಿಬಿಗೆ ತವರಿನ ಚಿಂತೆ ಕಾಡ್ತಾ ಇದೆ. ಈ ಪಂದ್ಯವನ್ನಾದ್ರೂ ಗೆಲ್ಲಲೇಬೇಕು ಅಂತಾ ಸಜ್ಜಾಗಿದೆ.