RCB : ಆರ್‌ ಸಿಬಿ ಫ್ರಾಂಚೈಸಿ ಸೇಲ್ ಮಾಡೋದ್ರಲ್ಲಿದ್ದಾರಾ ಮಾಲೀಕರು..!

RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಇತ್ತೀಚೆಗೆ, ಐಪಿಎಲ್ 2025 ಚಾಂಪಿಯನ್ ಆಗಿರುವ RCB ಫ್ರಾಂಚೈಸಿಯ ಮಾಲೀಕತ್ವದ ಬದಲಾವಣೆಗೆ ಸಂಬಂಧಿಸಿದಂತೆ ವರದಿಗಳು ಹೊರಬಿದ್ದಿವೆ.

ಇತ್ತೀಚಿಗಷ್ಠೆ ಆರ್‌ ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತ ಆಗಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ಕಠಿಣ ನಿಯಮವೊಂದು ಜಾರಿಯಾಗುವ ಸಾಧ್ಯತೆ ಇದೆ. ಆದ್ರೆ ಇದಕ್ಕೂ ಮಾಸುವ ಮುನ್ನವೇ RCB ಫ್ರಾಂಚೈಸಿಯನ್ನು ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್‌ನ ಪೋಷಕ ಸಂಸ್ಥೆಯಾದ ಡಿಯಾಜಿಯೋ (Diageo) ತನ್ನ ಹೂಡಿಕೆಯನ್ನು ಮಾರಾಟ ಮಾಡುವ ಬಗ್ಗೆ ಮಾತನಾಡಿದೆ ಎಂದು ವರದಿಯಾಗಿದೆ.

ಐಪಿಎಲ್​ನಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಬ್ರ್ಯಾಂಡ್​​ಗಳ ಜಾಹೀರಾತು ನಿಷೇಧ. ಅಂದರೆ ಟೂರ್ನಿಯಲ್ಲಿ ತಂಬಾಕು ಮತ್ತು ಮದ್ಯ ಜಾಹೀರಾತಿನ ಪ್ರಚಾರ ನಿಷೇಧಿಸಲು ಆರೋಗ್ಯ ಸಚಿವಾಲಯ ಚಿಂತಿಸುತ್ತಿದೆ. ಈ ನಿಯಮ ಜಾರಿಯಾದರೆ ಆರ್​ಸಿಬಿ ತಂಡಕ್ಕೆ ಸಮಸ್ಯೆ ಎದುರಾಗಲಿದೆ. ಆರ್​ಸಿಬಿ ಫ್ರಾಂಚೈಸಿ ಆಲ್ಕೋಹಾಲ್ ಕಂಪೆನಿಯ ಒಡೆತನದಲ್ಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಷೇರು ಮಾರಾಟ ಮಾಡಲು ಅಥವಾ ಸಂಪೂರ್ಣ ಫ್ರಾಂಚೈಸಿಯನ್ನು ಸೇಲ್ ಮಾಡಲು ಚರ್ಚಿಸಿದೆ ಎಂದು ವರದಿಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್. ಅಂದರೆ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 17 ಸಾವಿರ ಕೋಟಿ ರೂ. ಇದೀಗ, RCB ಅಭಿಮಾನಿಗಳು ಈ ಮಾಲೀಕತ್ವ ಬದಲಾವಣೆಯ ಬಗ್ಗೆ ಚಿಂತನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ 5.

Author:

...
Sushmitha N

Copy Editor

prajashakthi tv

share
No Reviews