CRICKET : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆರ್‌ಸಿಬಿ ನಾಯಕ

ಕ್ರಿಕೆಟ್‌: 

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸದ್ಯ 2025ರ ಐಪಿಎಲ್ ಸೀಸನ್​ನಲ್ಲಿ ಅಗ್ರಸಿಂಹಾಸನದಲ್ಲಿ ಆಸನವಾಗಿದೆ. ಎಲ್ಲ ಟೀಮ್​ಗಳಿಗೂ ಟಕ್ಕರ್ ಕೊಟ್ಟ ಆರ್​ಸಿಬಿ ಈ ಸಲ ಕಪ್​ ಗೆಲ್ಲುವ ಹಾಟ್ ಫೇವರಿಟ್ ಟೀಮ್ ಎನಿಸಿದೆ. 18 ವರ್ಷಗಳ ಕನಸನ್ನು ನನಸು ಮಾಡಲು ಆರ್​ಸಿಬಿಯ ಕ್ಯಾಪ್ಟನ್​ ರಜತ್ ಪಾಟಿದಾರ್ ಸೇರಿ ಮೂವರು ಆಟಗಾರರು ತಿಮ್ಮಪ್ಪನ ಮೊರೆ ಹೋಗಿದ್ದಾರೆ.

ಆಂಧ್ರ ಪ್ರದೇಶದ ವಿಶ್ವ ವಿಖ್ಯಾತ ತಿರುಪತಿಯಲ್ಲಿರುವ ತಿಮ್ಮಪ್ಪನ ದರ್ಶನವನ್ನು ಆರ್​ಸಿಬಿ ನಾಯಕ ರಜತ್ ಪಾಟಿದಾರ್, ವಿಕೆಟ್​ ಕೀಪರ್ ಕಮ್​ ಬ್ಯಾಟ್ಸ್​ಮನ್​ ಜಿತೇಶ್​ ಶರ್ಮಾ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ರಜತ್ ಹಾಗೂ ಜಿತೇಶ್​ ಶರ್ಮಾ ಜೊತೆ ಆರ್​ಸಿಬಿಯ ಮಹಿಳಾ ಆಟಗಾರ್ತಿ ಕನ್ನಡತಿ ಶ್ರೇಯಾಂಕ ಪಾಟೀಲ್​ ಕೂಡ ದರ್ಶನ ಪಡೆದಿದ್ದಾರೆ. ಮೂವರು ಆಟಗಾರರು ಒಟ್ಟಿಗೆ ದೇವರ ದರ್ಶನದಲ್ಲಿ ಭಾಗಿಯಾಗಿದ್ದರು.

ಆರ್​ಸಿಬಿ ಪ್ಲೇಯರ್ಸ್​​ ದೇವಾಲಯಕ್ಕೆ ಬರುವ ಕುರಿತು ಮೊದಲೇ ಮಾಹಿತಿ ಇದ್ದಿದ್ದರಿಂದ ಅಲ್ಲಿನ ಸಿಬ್ಬಂದಿ ವಿಶೇಷ ವ್ಯವಸ್ಥೆ ಮಾಡಿದ್ದರು. ಆದರೆ ನಾಯಕ ರಜತ್ ಪಾಟಿದಾರ್ ಅವರು ವಿಶೇಷ ವ್ಯವಸ್ಥೆ ನಿರಾಕರಿಸಿ ಎಲ್ಲರಂತೆ ಕ್ಯೂನಲ್ಲಿ ಬಂದು ಗೋವಿಂದನ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲ, ರಂಗನಾಯಕ ಪಂಟಪದಲ್ಲಿ ಕೊಡುವ ತೀರ್ಥಪ್ರಸಾದಂ ಕೂಡ ಸಾಲಿನಲ್ಲಿ ನಿಂತು ತೆಗೆದುಕೊಂಡಿದ್ದಾರೆ. ದೇವರನ್ನು ನೋಡಿ, ದರ್ಶನ ಪಡೆದಿರುವುದು ತುಂಬಾ ಖುಷಿ ಆಗಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

Author:

...
Keerthana J

Copy Editor

prajashakthi tv

share
No Reviews