ದೇವನಹಳ್ಳಿ : ಮಾದಕವಸ್ತು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಅದೆಷ್ಟೂ ಜಾಗೃತಿವಹಿಸಿದ್ರು ಕೂಡ ನಮ್ಮ ಯುವ ಜನತೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅಲ್ಲಲ್ಲಿ ರೇವ್ ಪಾರ್ಟಿಗಳು ಎಗ್ಗಿಲ್ಲದೇ ನಡೆಯುತ್ತಿರೋದು ಕಂಡು ಬರ್ತಾನೆ ಇದೆ, ಅದ್ರಲ್ಲೂ ಸಿಲಿಕಾನ್ ಸಿಟಿ ಸುತ್ತಾಮುತ್ತಾ ನಗರಗಳಲ್ಲಿ ರೇವ್‌ಪಾರ್ಟಿಗಳಿಗೆ ಬರವೇ ಇಲ್ಲದಂತಾಗಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲದಲ್ಲಿ ರೇವ್ ಪಾರ್ಟಿ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಏಕಾಏಕಿ ರೇಡ್ ಮಾಡಿದ್ದಾರೆ.
ಹೌದು, ನಿನ್ನೆ ದೇವನಹಳ್ಳಿ ತಾಲೂಕಿನ ಕನ್ನಮಂಗಲದಲ್ಲಿ ರೇವ್ ಪಾರ್ಟಿ ನಡೆದಿದ್ದು, ಸುಮಾರು 30ಕ್ಕೂ ಹೆಚ್ಚು ಮಂದಿ ಯುವ- ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಖಚಿತ ಮಾಹಿತಿ ಮೇರೆಗೆ ರೇವ್ ಪಾರ್ಟಿ ಮೇಲೆ ಏಕಾಏಕಿ ಪೊಲೀಸರು ರೇಡ್ ಮಾಡಿದ್ದು, ನಶೆಯಲ್ಲಿ ತೇಲುತ್ತಿದ್ದ ಯುವಕ- ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೊಕೇನ್, ಹೈಡ್ರೋ ಡ್ರಗ್ ಹಾಗೂ ಗಾಂಜಾ ಪತ್ತೆಯಾಗಿದ್ದು ಪೊಲೀಸರು ಸೀಜ್ ಮಾಡಿದ್ದಾರೆ.
ನಶೆಯಲ್ಲಿ ತೇಲುತ್ತಿದ್ದವರು ಸದ್ಯ ಪೊಲೀಸರ ಅತಿಥಿಯಾಗಿದ್ದು, ರೇವ್ ಪಾರ್ಟಿ ಆಯೋಜನೆ ಮಾಡಿದ್ದು ಯಾರು, ಎಲ್ಲಿಂದ ಡ್ರಗ್ ಸಪ್ಲೈ ಆಗ್ತಿದೆ ಎಂಬುದನ್ನ ವಿಚಾರಣೆ ನಡೆಸಲಾಗ್ತಿದೆ.