ನಟ ಯಶ್ಸಿನಿಮಾ-ಟಿವಿ
Rocking Star Yash :
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಯಶ್ ಸಹನಿರ್ಮಾಪಕರೂ ಕೂಡ ಆಗಿದ್ದಾರೆ. ರಣಬೀರ್ ಕಪೂರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಸಿನಿಮಾ ತಂಡವು ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುವುದು ಎಂದಿದೆ.
ರಾಕಿಭಾಯ್ ತಮ್ಮ ಫ್ಯಾನ್ಸ್ ಗೆ ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟು ದಿನ ಯಶ್ ಟಾಕ್ಸಿಕ್ ಸಿನಿಮಾದ್ದೇ ಸದ್ದು ಗದ್ದಲ ಇತ್ತು. ಈಗ ರಾಕಿ ಭಾಯ್ ರಾಮಾಯಣ ಆರಂಭ ಆಗುತ್ತಿರೋ ಬಗ್ಗೆ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಪ್ಯಾನ್ಸ್ ಗಳು ಅವರ ಮೂವಿಗಾಗಿ ಕಾದು ಬೇಸರಗೊಂಡಿದ್ದರೂ ಆದರೆ ಈಗ ಪ್ಯಾನ್ಸ್ ಗೆಲ್ಲಾ ಗುಡ್ ನ್ಯೂಸ್ ಸಿಕ್ಕಿದೆ.
ಯಶ್ ನಟಿಸಿ ನಿರ್ಮಿಸಿತ್ತಿರೋ ಬಾಲಿವುಡ್ ನ ಮೆಗಾಪ್ರಾಜೆಕ್ಟ್ ರಾಮಾಯಣದ ಶೂಟಿಂಗ್ ಗೆ ಶ್ರೀಕಾರ ಹಾಕಲಾಗಿದೆ. ನಿತೇಶ್ ತಿವಾರಿಯವರು ಬಹುಕೋಟಿ ವೆಚ್ಚದ ಎಪಿಕ್ ಹಾಕಿ ರಾಮಾಯಣ ಮೂವಿ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣ್ ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಯಶ್ ಅವರು ದಶಕಂಠ ರಾವಣನಾಗಿ ಮಿಂಚಲಿದ್ದಾರೆ.
ರಾಮಾಯಣ ಮಹಾಕಾವ್ಯವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ. ಮೊದಲ ಭಾಗದ ಶೂಟಿಂಗ್ ನಿನ್ನೆಯಿಂದ ಆರಂಭವಾಗಿದೆ, ಈ ಚಿತ್ರದಲ್ಲಿ ವಿಶೇಷ ಅಂದರೆ ಈ ರಾಮಾಯಣದಲ್ಲಿ ಯಶ್ ಬರೀ ರಾವಣನ ಪಾತ್ರ ಮಾಡ್ತಿಲ್ಲ , ಈ ಎಪಿಕ್ ಪ್ರಾಜೆಕ್ಟ್ ಗೆ ಸಹ ನಿರ್ಮಾಪಕ ಕೂಡ ಆಗಿದ್ದಾರೆ. ನಿಮಿತ್ ಮಲ್ಹೋತ್ರ ಜೊತೆಗೆ ಯಶ್ ಒಡೆತನದ ಮಾನ್ ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾಗೆ ಬಂಡವಾಳವನ್ನು ಹೂಡಿದೆ.