ರಾಮನವಮಿ ವಿಶೇಷ | ಸುಲಭವಾಗಿ ಮಾಡಿ ಬೆಲ್ಲದ ಪಾನಕ

ರಾಮನವಮಿ ಹಬ್ಬದಂದು ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದವಾಗಿ ಪಾನಕವನ್ನು ವಿತರಿಸಲಾಗುತ್ತದೆ. ಸಾಮಾನ್ಯವಾಗಿ ಚೈತ್ರ ಮಾಸದ ಸಮಯದಲ್ಲಿ ವಿಪರೀತ ಬಿಸಿಲಿರುವ ಕಾರಣ ದೇಹಕ್ಕೆ ತಂಪು ಎಂಬ ಕಾರಣಕ್ಕೆ ಪಾನಕವನ್ನು ಹಂಚಲಾಗುತ್ತದೆ. ಜೊತೆಗೆ ಇದು ವಿಷ್ಣುವಿಗೆ ಪ್ರಿಯವಾದ ಪಾನೀಯವಾಗಿರುವುದರಿಂದ ರಾಮನವಮಿ ದಿನ ದೇವರಿಗೆ ಪಾನಕವನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಹಾಗಿದ್ರೆ ಸುಲಭವಾಗಿ ಪಾನಕ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಬೇಕಾಗುವ ಸಾಮಾಗ್ರಿಗಳು:

ನೀರು – ಅಗತ್ಯಕ್ಕೆ ತಕ್ಕಷ್ಟು

ಬೆಲ್ಲ – ರುಚಿಗೆ ತಕ್ಕಷ್ಟು

ಕಾಳು ಮೆಣಸಿನ ಪುಡಿ- ಸ್ವಲ್ಪ

ಶುಂಠಿ ಪುಡಿ – ಅಗತ್ಯಕ್ಕೆ ತಕ್ಕಷ್ಟು

ನಿಂಬೆ ರಸ – ಸ್ವಲ್ಪ

ಏಲಕ್ಕಿ ಪುಡಿ – 1 ಚಿಟಿಕೆ

*ತಯಾರಿಸುವ ವಿಧಾನ:

ಒಂದು ಪಾತ್ರೆಯನ್ನು ತೆಗೆದುಕೊಂಡು ನಿಮ್ಮ ಅಳತೆಗೆ ತಕ್ಕಷ್ಟು ಅದಕ್ಕೆ ನೀರನ್ನು ಹಾಕಿ. ನಂತರ ಆ ನೀರಿಗೆ ತುರಿದ ಅಥವಾ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ, ಅದು ಕರಗುವರೆಗೂ ಬೆರೆಸಿ.ಈಗ ಅದಕ್ಕೆ ನಿಂಬೆ ರಸ, ಕಾಳು ಮೆಣಸಿನ ಪುಡಿ, ಶುಂಠಿ ಪುಡಿ, ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ರೆಡಿ.ನೀವು ನಿಂಬೆ ರಸದ ಬದಲಿಗೆ ಇದಕ್ಕೆ ಹುಣಸೆ ರಸವನ್ನು ಕೂಡಾ ಸೇರಿಸಬಹುದು.

 

Author:

share
No Reviews