SANDLEWOOD :
ಸ್ಯಾಂಡಲ್ವುಡ್ನ ಸ್ಟಾರ್ ನಟ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ, ತಮ್ಮ ಬಹುನಿರೀಕ್ಷಿತ ಚಿತ್ರ ರಿಚರ್ಡ್ ಆಂಟೋನಿ ಮತ್ತು ಮಿಥ್ಯ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯೂಸಿ ಸಮಯದ ನಡುವೆಯೂ ತಮ್ಮ ಕುಟುಂಬದ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಯ ಮೀಸಲಿಟ್ಟು ರಕ್ಷಿತ್ ಭಾಗವಹಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅಲೆಯೂರಿನ ತಮ್ಮ ‘ದೊಡ್ಡ ಮನೆ’ ಕುಟುಂಬದ ಹರಕೆಯ ನೇಮೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮೂಲ ಮೈಸಂದಾಯ, ಸಾವಿರಾಳು ಜುಮಾದಿ, ಜೋಡು ಪಂಜುರ್ಲಿ ದೈವಗಳ ನೇಮೋತ್ಸವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ನಡುರಾತ್ರಿ ನಡೆದ ನೇಮೋತ್ಸವದಲ್ಲಿ ಅವರು ಕುಟುಂಬ ಸಮೇತರಾಗಿ ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿದರು.
ದೈವದ ಯಾವುದೇ ಕಾರ್ಯಕ್ರಮಗಳನ್ನು ತಪ್ಪಿಸದ ನಟ ರಕ್ಷಿತ್ ಶೆಟ್ಟಿ, ಕುಟುಂಬ ಸಮೇತರಾಗಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. ನಡುರಾತ್ರಿ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ. ದೈವದ ಭಂಡಾರ ಹೊರಡುವಾಗಲೂ ರಕ್ಷಿತ್ ಶೆಟ್ಟಿ, ತಂದೆ ತಾಯಿಯ ಜೊತೆ ಭಾಗವಹಿಸಿದ್ದರು. ಕುಟುಂಬದ ದೈವಕ್ಕೆ ವಿಶೇಷವಾಗಿ ನಡೆದುಕೊಳ್ಳುವ ನಟ, ಹೆಸರಿಗೆ ತಕ್ಕಂತೆ ಕುಟುಂಬ, ಪರಿಸರ, ಮನೆ ವಾತಾವರಣದಲ್ಲೂ ಸಿಂಪಲ್ಲಾಗಿದ್ದಾರೆ.