GUBBI: ತುಮಕೂರಿನಲ್ಲಿ ಮತ್ತೆ ರಾಜಣ್ಣ vs ವಾಸಣ್ಣ? ರಾಜಣ್ಣ ಕಾಲೆಳೆದ ವಾಸಣ್ಣ ಫ್ಯಾನ್ ಪೇಜ್

ಗುಬ್ಬಿ:

ತುಮುಲ್‌ ಚುನಾವಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಸಚಿವ ರಾಜಣ್ಣ ವಿರುದ್ಧ ಎಸ್‌.ಆರ್‌.ಶ್ರೀನಿವಾಸ್‌ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ರು. ಇದಾದ ಬಳಿಕ ಉಭಯ ನಾಯಕರ ಬೆಂಬಲಿಗರ ನಡುವೆಯೂ ಪೋಸ್ಟ್‌ ವಾರ್‌ ಶುರುವಾಗಿತ್ತು. ಇದೀಗ ಹನಿಟ್ರ್ಯಾಪ್‌ ವಿಚಾರ ಮುನ್ನೆಲೆಗೆ ಬಂದ ಬೆನ್ನಲ್ಲಿಯೇ ಮತ್ತೆ ಪೋಸ್ಟ್‌ ಸಮರ ಶುರುವಾಗಿದ್ದು, ಗುಬ್ಬಿ ಶಾಸಕರ ಫ್ಯಾನ್ಸ್ ಕ್ಲಬ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಅಣ್ಣನ ಕೀಪ್ ಸ್ಟೋರಿ ಎಂಬ ಹೆಸರಿನ ಪೋಸ್ಟ್ ಹರಿದಾಡುತ್ತಿದೆ.

ಎಸ್.ಆರ್.ಶ್ರೀನಿವಾಸ್ ಗುಬ್ಬಿ ಎಂಎಲ್ಎ ಎಫ್ ಸಿ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹನಿ ಟ್ರ್ಯಾಪ್ ಅಲ್ಲ ಅದು ಮಂತ್ರಿಯ ಓಲ್ಡ್ ಸೆಟಪ್..!, ಮಡಿಕ್ಕಂಡಿದ್ದವಳನ್ನೇ ರುಬ್ಬಿತು ಮಂತ್ರಿ ಫ್ಯಾಮಿಲಿ, ಡಿಕೆ ಹತ್ರ ಹೋಗ್ತೀನಿ ಅಂದ್ಳು ಲೇಡಿ..!, ಆ ಕ್ಷಣವೇ ರೆಡಿ..!, ಹನಿ ಟ್ರ್ಯಾಪ್ ಕಹಾನಿ, ಈ ರೀತಿ ಸಚಿವರ ವಿರುದ್ಧ ವಾಸಣ್ಣ ಫ್ಯಾನ್ಸ್ ಪೋಸ್ಟ್‌ ಹಾಕಿ ಕಾಲೆಳೆದಿದ್ದಾರೆ.

ಈ ಪೋಸ್ಟ್ ಬಳಿಕ ಮತ್ತೊಂದು ಪೋಸ್ಟ್ ಹಾಕಿ ಸಚಿವ ರಾಜಣ್ಣ ಅವರನ್ನ ಛೇಡಿಸುವ ಕೆಲಸವನ್ನ ಈ ಖಾತೆಯಲ್ಲಿ ಮಾಡಲಾಗಿದೆ. ಹಾಸನಕ್ಕೆ ರೇವಣ್ಣ ಅಂಡ್ ಸನ್.. ತುಮಕೂರಿಗೆ ರಾಜಣ್ಣ ಅಂಡ್ ಸನ್ ಎಂದು ರಾಜೇಂದ್ರ ಹಾಗೂ ಪ್ರಜ್ವಲ್ ಪೋಟೋವನ್ನು, ರೇವಣ್ಣ ರಾಜಣ್ಣ ಅವರ ಪೋಟೋ ಜೊತೆಗೆ ಬರಹ ಜೋಡಿಸಿ ಪೋಸ್ಟ್ ಮಾಡಿರುವುದು ತಾಲ್ಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಒಟ್ಟಾರೆ ಜಿಲ್ಲೆಯ ಕಾಂಗ್ರೆಸ್ ಒಡೆದ ಮನೆ ಎಂಬುದಕ್ಕೆ ಈ ಪೋಸ್ಟ್ ಸಮರ ಕಾರಣವಾಗಿದೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ನಾಯಕರ ನಡುವೆ ಶಾಸಕರ ಹೆಸರಿನಲ್ಲಿ ಅಸಮಾಧಾನದ ಪೋಸ್ಟ್ ಅಭಿಮಾನಿಗಳನ್ನು ಕೆರಳಿಸಿದೆ. ಕಾಮೆಂಟ್ ಮಾಡುವ ಇಬ್ಬರ ಅಭಿಮಾನಿಗಳು ಬರವಣಿಗೆಯಲ್ಲಿ ಅಸಭ್ಯ ಮಾತುಗಳಲ್ಲಿ ವಾಕ್ಸಮರ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಫೈಟ್ ಯಾವ ಹಂತಕ್ಕೆ ತಲುಪಲಿದೆ ಅನ್ನೋದನ್ನ ಕಾದುನೋಡಬೇಕಿದೆ.

Author:

share
No Reviews