ತುಮಕೂರು:
ಒಂದು ಕಡೆ ಯುಜಿಡಿ ಗಬ್ಬೆದ್ದು ನಾರುತ್ರಿದ್ರೆ ಮತ್ತೊಂದೆಡೆ ಜನರುನ ಓಪನ್ ಆಗಿದ್ದ ಯುಜಿಡಿಗೆ ಪೂಜೆಸಲ್ಲಿಸುತ್ತಿರೋ ದೃಶ್ಯ. ಈ ರೀತಿಯಾಗಿ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ 31 ವಾರ್ಡ್ ಜಯನಗರ ಜನ ಓಪನ್ ಆಗಿ ಗಬ್ಬೆದ್ದು ನಾರುತ್ತಿದ್ದ ಯುಜಿಡಿಗೆ ಪೂಜೆ ಮಾಡುವ ಮೂಲಕ ಅಧಿಕಾರಿಗಳ ವಿರುದ್ಧ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದರು.
ತುಮಕೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗಾಗಲೇ ಎರಡನೇ ಬೆಂಗಳೂರು ಅಂತ ಹೆಸರು ಪಡೆದಿದೆ. ಆದರೆ ತುಮಕೂರಿನ ಮಹಾನಗರ ಪಾಲಿಕೆಯಲ್ಲಿ ಮಾತ್ರ ಸ್ವಚ್ಛತೆ ಅನ್ನೋದು ಕಾಣ್ತಿಲ್ಲ. ಪಾಲಿಕೆಯ ನಿರ್ಲಕ್ಷ್ಯೆ ಮತ್ತೊಂದು ನಿದರ್ಶನ ವಾರ್ಡ್ ನಂಬರ್ 31 ಜಯನಗರ ಜನರರಿಗೆ ಸಂಕಷ್ಟ ಎದುರಾಗಿದೆ. ಸ್ಮಾರ್ಟ್ ಸಿಟಿ ನಮ್ಮದು ಅಂತ ಬೊಬ್ಬೆ ಹೊಡೆಯೋ ಅಧಿಕಾರಿಗಳೇ ಒಮ್ಮೆ ಇತ್ತತಿರುಗಿ ನೋಡಿ. ಹಲವು ವರ್ಷದಿಂದ ಈ ಯುಜಿಡಿ ಓಪನ್ ಆಗಿ ಅಕ್ಕಪಕ್ಕದ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಜಯನಗರದಲ್ಲಿ ಹಲವು ವರ್ಷಗಳಿಂದ ಯುಜಿಡಿ ಓಪನ್ ಆಗಿದ್ದು ಜನರ ಮೇಲೆ ಪರಿಣಾಮ ಬೀರುತ್ತಿದೆ. ಈ ಕುರಿತು ಸ್ಥಳೀಯರು ಮಹಾನಗರ ಪಾಲಿಕೆಯ ಗಮನಕ್ಕೆ ತಂದ್ರು ಕೂಡ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇನ್ನು ಕಳದೆ ನಾಲ್ಕು ತಿಂಗಳಿಂದ ಈ ಸ್ಥಳ ಗಬ್ಬೆದ್ದು ನಾರುತ್ತಿದ್ರೂ ಯಾವೊಬ್ಬ ಅಧಿಕಾರಿಯು ಇತ್ತ ಮೂಸಿಯು ನೋಡ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದರು.
ಈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಎಷ್ಟಿದೆ ಅಂತ. ತುಮಕೂರಿನಲ್ಲಿ ಎಲ್ಲಿ ನೋಡಿದ್ರು ಸಮಸ್ಯೆಗ ಳಆಗರವಾಗಿದೆ. ನೀರು ಬಂದ್ರೆ ಕರೆಂಟ್ ಇರೋಲ್ಲ. ಕರೆಂಟ್ ಇದ್ರೆ ನೀರಿಲ್ಲ, ರೋಡ್ ಕ್ಲೀನ್ ಆದ್ರೆ ಯುಜಿಡಿ ಪ್ರಾಬ್ಲಮ್, ಯುಜಿಡಿ ಕ್ಲೀನ್ ಆದ್ರೆ ರೋಡ್ ಪ್ರಾಬ್ಲಮ್. ಒಟ್ನಲ್ಲಿ ತುಮಕೂರು ಮಹಾನಗರ ಪಾಲಿಕೆಯ ಅದ್ವಾನದ ಕೆಲಸದಿಂದಾಗಿ ಜನಸಾಯ್ತಿರೋದಂತು ನಿಜ.ಇನ್ನಾದ್ರು ಅಧಿಕಾರಿಗಳ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ.