ಬೆಂಗಳೂರು : ಮೆಟ್ರೋ ಶೌಚಾಲಯ ಶುಲ್ಕ ತೀರ್ಮಾನಕ್ಕೆ ಸಾರ್ವಜನಿಕರಿಂದ ವಿರೋಧ

ಬೆಂಗಳೂರು: ಮೆಟ್ರೋ ಪ್ರಯಾಣದ ದರವನ್ನು ಇತ್ತೀಚೆಗಷ್ಟೇ ಹೆಚ್ಚಿಸಿರುವ ಬಿಎಂಆರ್‌ ಸಿಎಲ್, ಇದೀಗ ಶೌಚಾಲಯ ಬಳಕೆಗೆ ಶುಲ್ಕ ವಿಧಿಸಲು ಕೈಗೊಂಡಿರುವ ತೀರ್ಮಾನ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಬೆಂಗಳೂರು ನಗರದ 12 ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರವೇಶವಿರುವ ಶೌಚಾಲಯಗಳಿಗೆ ಬಳಸುವವರು ಇನ್ನು ಮುಂದೆ ಹಣ ಪಾವತಿಸ ಬೇಕಂತೆ. BMRCL ಮೂಲಗಳ ಪ್ರಕಾರ, ಈ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ವಹಣೆಯ ಹೊಣೆ ಇಂಟರ್ನ್ಯಾಷನಲ್ ಖಾಸಗಿ ಸಂಸ್ಥೆಗೆ ವಹಿಸಲಾಗಿದ್ದು, ಈ ಸಂಸ್ಥೆ ಬಳಕೆದಾರರಿಂದ ಶುಲ್ಕ ವಸೂಲಾತಿ ಆರಂಭಿಸಲಾಗಿದೆ.  

BMRCL ಹೇಳಿರುವಂತೆ, ಮೆಟ್ರೋ ಕಾರ್ಡ್ ಅಥವಾ ಟೋಕನ್ ಮೂಲಕ ಒಳಗೆ ಪ್ರವೇಶಿಸಿದ ಪ್ರಯಾಣಿಕರಿಗೆ ಲಭ್ಯವಿರುವ ಶೌಚಾಲಯಗಳು ಉಚಿತವಾಗಿಯೇ ಇರುತ್ತವೆ. ಆದರೆ ನಿಲ್ದಾಣದ ಹೊರಗಿನಿಂದ ಸಾರ್ವಜನಿಕರಿಗೆ ಲಭ್ಯವಿರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ವಸೂಲಿಸಲಾಗುತ್ತದೆ ಎಂದು ತಿಳಿಸಿದೆ.

ಈ ತೀರ್ಮಾನವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮೆಟ್ರೋ ಪ್ರಯಾಣ ಈಗಾಗಲೇ ದುಬಾರಿ ಆಗಿದ್ದು, ಶೌಚಾಲಯಕ್ಕೂ ಹಣ ಪಾವತಿಸಬೇಕಾ ಎಂಬ ಪ್ರಶ್ನೆ ಎದ್ದಿದ್ದು, ಜನಸಾಮಾನ್ಯರು ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews