ತುಮಕೂರು:
ತುಮಕೂರಿನಲ್ಲಿ ನಿನ್ನೆಯಿಂದ ತಮ್ಮ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕಾರ್ಯಕರ್ತರು ಆಹೋರಾತ್ರಿ ಧರಣಿ ನಡೆಸ್ತಿದ್ದಾರೆ. ಇಂದಿಗೆ ಎರಡು ದಿನವಾದ್ರು ಯಾರು ಕೂಡ ಬಂದಿಲ್ಲ ಅಂತ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು. ತುಮಕೂರು ಡಿಸಿ ಯಾರ ಪರ.. ಯಾರ ಪರ ಎಂದು ಡಿಸಿ ವಿರುದ್ಧ ಕಿಡಿಕಾರಿ ಘೋಷಣೆಗಳನ್ನು ಕೂಗುತ್ತ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರದ ಸುತ್ತೋಲೆಯಂತೆ ನಮಗೆ ಭೂಮಿ ಮತ್ತು ವಸತಿಯನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಕಾರ್ಯಕರ್ತರು, ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ರು. ಇನ್ನು ಆಹೋರಾತ್ರಿ ಧರಣಿಗೆ ಬಂದ ಮಹಿಳೆಯರು ತಮ್ಮ ಮಕ್ಕಳಿಗಾಗಿ ಅಲ್ಲಿಯೇ ಸೀರೆಯಿಂದ ತೊಟ್ಟಿಲನ್ನು ಕಟ್ಟಿದ್ರು. ನಿನ್ನೆಯಿಂದ ಆಹೋರಾತ್ರಿ ಧರಣಿ ನಡೆಸುತ್ತ ಅಲ್ಲಿಯೇ ಮಕ್ಕಳು ಮರಿಯೊಂದಿಗೆ ಅಡುಗೆ ಮಾಡಿಕೊಂಡು ತುಮಕೂರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ತಮ್ಮ ಹಲವು ವರ್ಷಗಳ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ರು ಕೂಡ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮಗೆ ಸ್ಪಂದಿಸುತ್ತಿಲ್ಲ ಅಂತ ಮಕ್ಕಳು ಮರಿಯೊಂದಿಗೆ ಬಂದು ಆಹೋರಾತ್ರಿ ಧರಣಿ ನಡೆಸುತ್ತಿರುವುದು ಶೋಚನೀಯ ಸಂಗತಿ. ಇನ್ನಾದ್ರೂ ತುಮಕೂರು ಡಿಸಿ ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆಯನ್ನ ಬಗೆಹರಿಸಬೇಕಿದೆ.