ತುಮಕೂರು:
ತುಮಕೂರು ಮಹಾನಗರ ಪಾಲಿಕೆ ಮತ್ತು ಮುನಿಸಿ ಪಾಲಿಟಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಾ ಇರೋ ಕಾರ್ಮಿಕರನ್ನು ಖಾಯಂ ಮಾಡುವಂತೆ ಹಾಗೂ ಸಮಾನ ವೇತನ ನೀಡುವಂತೆ ಆಗ್ರಹಿಸಿ ನೂರಾರು ಮಂದಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ನಗರದ ಡಿಸಿ ಕಚೇರಿ ಮುಂದೆ ಜಮಾಯಿಸಿದ ಹೊರಗುತ್ತಿಗೆ ನೌಕರರಾದ ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ವಾಟರ್ ಮ್ಯಾನ್ ಗಳು ಕೆಂಪು ಬಾವುಟ ಹಿಡಿದು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ನಾವು ಸುಮಾರು 10 ರಿಂದ 15 ವರ್ಷಗಳಿಂದ ಹೊತಗುತ್ತಿಗೆ ನೌಕರರಾಗಿ ಕೆಲಸ ಮಾಡ್ತಾ ಇದ್ದೀವೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡ್ತಾ ಇಲ್ಲ… ಇಷ್ಟು ವರ್ಷ ಕೆಲಸ ಮಾಡಿದ್ರು ಪೌರ ಕಾರ್ಮಿಕರ ರೀತಿ ನಮ್ಮನ್ನು ಖಾಯಂ ಮಾಡಿ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದ್ರು. ಈ ವೇಳೆ ಮಾತನಾಡಿದ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ, 10-15 ವರ್ಷದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡುವಂತಹ ಕೆಲಸ ಮಾಡುತಿದ್ದೇವೆ, ಬೆಳಕಿನಿಂದ ಸಂಜೆವರೆಗೆ ಕೆಲಸ ಮಾಡುತ್ತೀವಿ, ಆದ್ರೆ ಸರ್ಕಾರ ಕನಿಷ್ಠ ವೇತನ ಅದನ್ನು ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ನೀರು ಸರಬರಾಜು ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ತುಮಕೂರು ಮಹಾನಗರ ಪಾಲಿಕೆಯಲ್ಲಿ ನೀರು ಸರಬರಾಜು ಮಾಡುವಂತಹ ವಾಟರ್ ಮ್ಯಾನ್ ಗಳು, ಡ್ರೈವರ್ ಗಳು, ಕಸ ವಿಲೇವಾರಿ ಮಾಡುವಂತಹ ನೌಕರರಿಗೆ ಸಮಾನ ವೇತನ ನೀಡಬೇಕು, ಇದೇ ಮುಂಬರುವ ಬಜೆಟ್ ಅಲ್ಲಿ ನಮ್ಮ ಎಲ್ಲಾ ಸಮಸ್ಯೆ ಬಗೆಹರಿಸಿ ಖಾಲಿ ಇರುವ ಹುದ್ದೆಗಳನ್ನು ತುಂಬುವಂತಹ ಕೆಲಸ ಮಾಡಬೇಕು, ಮುಂಬರುವ ಬಜೆಟ್ ನಲ್ಲಿ ನಮ್ಮ ಸಮಸ್ಯೆಯನ್ನು ಆಲಿಸದಿದ್ದರೆ ನಮ್ಮ ಎಲ್ಲಾ ಕೆಲಸವನ್ನು ಸ್ಥಗಿತ ಮಾಡಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನಾದರೂ ಮನ್ಸಿಪಾಲ್ ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರ ಕಷ್ಟಗಳನ್ನು ಅರಿತು ಕಾಂಗ್ರೆಸ್ ಸರ್ಕಾರ ಸಮಸ್ಯೆ ಬಗೆಹರಿಸುತ್ತಾರಾ ಎಂದು ಕಾದುನೋಡಬೇಕಿದೆ..