ಪಾವಗಡ: ಅಪಘಾತದಲ್ಲಿ ಮೃತಪಟ್ಟ ಪೌರ ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ..!

ಪಾವಗಡದಲ್ಲಿ ಸಫಾಯಿ ಕರ್ಮಚಾರಿ ಕಾವಲಿ ಸಮಿತಿ ವತಿಯಿಂದ ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ
ಪಾವಗಡದಲ್ಲಿ ಸಫಾಯಿ ಕರ್ಮಚಾರಿ ಕಾವಲಿ ಸಮಿತಿ ವತಿಯಿಂದ ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ
ತುಮಕೂರು

ಪಾವಗಡ: 

ಪಾವಗಡ ಪುರಸಭೆಯ ಪೌರಕಾರ್ಮಿಕ ಮಂಜುನಾಥ್‌ ಕಳೆದ ವಾರ ಟ್ರ್ಯಾಕ್ಟರ್‌ ನಡಿ ಸಿಲುಕಿ ಸಾವನ್ನಪ್ಪಿದ್ದರು. ಈ ದುರ್ಘಟನೆ ಸಂಬಂಧ ನ್ಯಾಯಕ್ಕಾಗಿ ಇಂದು ಸಫಾಯಿ ಕರ್ಮಚಾರಿ ಕಾವಲಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಪಾವಗಡ ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂದೆ ಜಮಾಯಿಸಿದ ನೂರಾರು ಕರ್ಮಚಾರಿ ಕಾವಲಿ ಸಮಿತಿಯ ಸದಸ್ಯರು, ಸಹೋದ್ಯೋಗಿಗಳು, ಪೌರಕಾರ್ಮಿಕ ಸಂಘಟನೆಗಳು, ಸ್ಥಳೀಯ ಮುಖಂಡರು ಮತ್ತು ನಾಗರೀಕರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪೌರಕಾರ್ಮಿಕ ಮಂಜುನಾಥ್ ಅವರನ್ನು ನಿಯೋಜಿತ ಕರ್ತವ್ಯವಲ್ಲದ ಕೆಲಸಕ್ಕೆ ನೇಮಿಸಿದ್ದರಿಂದ ದುರ್ಘಟನೆಗೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಕನ್ನಮೇಡಿ ಕೃಷ್ಣಮೂರ್ತಿ, ಪಿ. ಹನುಮಂತರಾಯಪ್ಪ, ರಾಮಲಿಂಗಪ್ಪ, ಸಿದ್ದಗಂಗಯ್ಯ, ಹನುಮಕ್ಕ, ಓಬಳೇಶ, ಸಿದ್ದಗಂಗಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇನ್ನು ಅಫಘಾತದಲ್ಲಿ ಮೃತಪಟ್ಟ ಪೌರ ಕಾರ್ಮಿಕ ಮಂಜುನಾಥ್‌ ಸಾವಿಗೆ ನ್ಯಾಯ ದೊರಕಲೇಬೇಕು!" ಎಂಬ ಘೋಷಣೆಗಳನ್ನು ಕೂಗಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸಫಾಯಿ ಕರ್ಮಚಾರಿಗಳ ರಾಜ್ಯ ಸಂಚಾಲಕರಾದ ಡಾ.ಕೆ.ಬಿ ಓಬಳೇಶ್‌, ಪಾವಗಡ ಪುರಸಭೆಯು ಪೌರಕಾರ್ಮಿಕ ಮಂಜುನಾಥ್ ಅವರನ್ನು ನಿಯೋಜಿತ ಕರ್ತವ್ಯವಲ್ಲದ ಕೆಲಸಕ್ಕೆ ನೇಮಿಸಿಕೊಂಡಿದ್ದರಿಂದ ದುರ್ಘಟನೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಂಜುನಾಥ್ ಕುಟುಂಬಕ್ಕೆ ತಕ್ಷಣ ₹50 ಲಕ್ಷ ಪರಿಹಾರ ನೀಡಬೇಕು ಹಾಗೂ ಮಂಜುನಾಥ್‌ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಕೊಡಿಸಿ ಎಂಬ ಕೂಗು ಕೇಳಿ ಬಂದಿತು.

Author:

...
Editor

ManyaSoft Admin

Ads in Post
share
No Reviews