FILM
ಸ್ಯಾಂಡಲ್ವುಡ್ನ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬುಡಕಟ್ಟು ವಸತಿ ಶಾಲೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಮಕ್ಕಳ ಆಸೆಗಳನ್ನ ಕೇಳಿಕೊಂಡು ಆ ಕನಸುಗಳನ್ನ ಈಡೇರಿಸಿದ್ದಾರೆ. ಧ್ರುವ ಸರ್ಜಾ ಇತ್ತೀಚೆಗೆ ಪತ್ನಿ ಮತ್ತು ಮಕ್ಕಳ ಜೊತೆ ನಾಗರಹೊಳೆ ಕಾಡಿಗೆ ಸಫಾರಿಗೆ ತೆರಳಿದ್ದು, ಅಲ್ಲಿಯೇ ಹತ್ತಿರದಲ್ಲಿದ್ದ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಮಕ್ಕಳಿಗೆ ಅಗತ್ಯವಾಗಿ ಬೇಕಾದ ವಸ್ತುಗಳ ಪಟ್ಟಿ ತೆಗೆದುಕೊಂಡು ಎಲ್ಲವನ್ನೂ ಮಕ್ಕಳಿಗೆ ತಲುಪಿಸಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಗಹೊಳೆ ಸಮೀಪದ ಹುತ್ಕೂರು ಹಾಡಿಯ ಸರ್ಕಾರಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಹಾಗೂ ಶಿಕ್ಷರಿಗೆ ಸರ್ಪ್ರೈಸ್ ನೀಡಿದ್ದಾರೆ. ಇಷ್ಟೇ ಅಲ್ಲದೇ ಆ ಶಾಲೆಗೆ ಸ್ಪೋರ್ಟ್ಸ್ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಧ್ರುವ ಸರ್ಜಾ ಮತ್ತು ಪತ್ನಿ ಮಕ್ಕಳ ಜೊತೆ ಸಮಯ ಕಳೆದು ಅವರ ಸಮಸ್ಯೆಗಳನ್ನೆಲ್ಲಾ ಒಂದೊಂದೆ ಕೇಳಿಕೊಂಡು ಅವರಿಗೆ ಅಗತ್ಯ ಇರುವ ವಸ್ತುಗಳ ಕುರಿತು ಶಿಕ್ಷಕರೊಂದಿಗೆ ಮಾಹಿತಿ ಪಡೆದುಕೊಂಡು ಹೋಗಿ ಶಾಲಾ ಮಕ್ಕಳಿಗೆ ಬೇಕಿರೋ ಅವಶ್ಯಕ ವಸ್ತುಗಳನ್ನ ತರಿಸಿಕೊಟ್ಟಿದ್ದಾರೆ. ಧ್ರುವ ಸರ್ಜಾ ಕಳಿಸಿರುವ ವಸ್ತುಗಳನ್ನು ಸ್ವೀಕರಿಸಿರುವ ವಿದ್ಯಾರ್ಥಿಗಳು ಧ್ರುವ ಸರ್ಜಾಗೆ ಧನ್ಯವಾದ ಹೇಳಿದ್ದಾರೆ.