ತುಮಕೂರು : ಸೀಜ್ ಮಾಡಿದ್ದ ಡ್ರಗ್ಸ್ ಅನ್ನು ನಾಶಪಡಿಸಿದ ಪೊಲೀಸರು

ವಶಪಡಿಸಿಕೊಂಡಿದ್ದ ಡ್ರಗ್ಸ್
ವಶಪಡಿಸಿಕೊಂಡಿದ್ದ ಡ್ರಗ್ಸ್
ತುಮಕೂರು

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಾಂಜಾ ಸಾಗಾಟ ಮಾಡ್ತಾ ಇರೋದು ಹೆಚ್ಚಾಗಿತ್ತು. ನಗರದ ಹಲವೆಡೆ ಯುವಕರು ಗಾಂಜಾ ಮತ್ತಲ್ಲಿ ತೇಲ್ತಾ ಇದ್ದರು. ಅಲ್ಲದೇ ಗಾಂಜಾ ಏಟ್‌ ಅಲ್ಲಿ ಅನೇಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಜೊತೆಗೆ ಗಲಾಟೆಗಳಲ್ಲಿ ಚಾಕು ಇರಿತ, ಕೊಲೆ ಯತ್ನ, ಕೊಲೆಯಂತಹ ಘಟನೆಗಳು ಕೂಡ ಜರುಗಿಹೋಗಿದ್ದವು, ಹೀಗಾಗಿ  ಪೊಲೀಸ್‌ ಇಲಾಖೆಗೆ ಹಲವು ದೂರುಗಳು ಬಂದ ಬೆನ್ನಲ್ಲೇ ಅಲರ್ಟ್‌ ಆದ ಖಾಕಿ ಕಾರ್ಯಾಚರಣೆಗೆ ಇಳಿದಿತ್ತು.

ವಿವಿಧ ಪ್ರಕರಣಗಳನ್ನು ಭೇದಿಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿ, ಅನೇಕರನ್ನು ಬಂಧಿಸಿದ್ದರು. ಹಾಗೂ ತುಮಕೂರು ಜಿಲ್ಲೆಯಲ್ಲಿ ಎನ್‌.ಡಿ.ಪಿ.ಎಸ್‌ ಕಾಯ್ದೆ ಅಡಿಯಲ್ಲಿ ಬರೋಬ್ಬರಿ 51 ಕೆ.ಜಿ 707 ಗ್ರಾಂ ಗಾಂಜಾವನ್ನು ಹಾಗೂ 47 ಗ್ರಾಂ ಎಂಡಿಎಂಎಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.

ವಶಪಡಿಸಿಕೊಂಡಿದ್ದ ಮಾದಕ ವಸ್ತುವನ್ನು ಜಿಲ್ಲಾ ಮಟ್ಟದ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಪಡಿಸಲು ಸಂಬಂಧಪಟ್ಟ ಕೋರ್ಟ್‌ನಿಂದ ಪರ್ಮಿಷನ್‌ ಪಡೆಯಲಾಗಿತ್ತು. ಈ ಬೆನ್ನಲ್ಲೇ ಇಂದು ತುಮಕೂರು ನಗರ ಹೊರ ವಲಯದ ವಸಂತನರಸಾಪುರ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಡ್ರಗ್ ಡಿಸ್ಪೋಸಲ್ ಕಮಿಟಿಯ ವತಿಯಿಂದ ನಿಯಮಾನುಸಾರ ಡ್ರಗ್ಸ್ಅನ್ನು ನಾಶಮಾಡಲಾಯಿತು.

Author:

share
No Reviews