ಪಾವಗಡ :
ಕದನ ವಿರಾಮ ಘೋಷಣೆ ಆಗಿದ್ರು ಕುತಂತ್ರಿ ಬುದ್ಧಿ ತೋರಿಸಿದ ಪಾಪಿ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರೆಸಿತ್ತು. ಪಾಕ್‌ನ ದಾಳಿಗೆ ಭಾರತ ತಕ್ಕ ಉತ್ತರ ನೀಡಿದೆ. ಪಾಕ್‌ನ ನರಿಬುದ್ಧಿಯನ್ನು ಖಂಡಿಸಿರೋ ಭಾರತೀಯರು ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತ ಪಾವಗಡದಲ್ಲಿ ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಶನಿಮಹಾತ್ಮ ದೇವಸ್ಥಾನ ಸರ್ಕಲ್‌ನಲ್ಲಿ ಬೀದಿಬದಿ ವ್ಯಾಪರಸ್ಥರು, ಲಾರಿ ಹಮಾಲಿಗಳು, ಆಟೋ ಚಾಲಕರು ಹಾಗೂ ಸಾರ್ವಜನಿಕರು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಪಾಕಿಸ್ತಾನದ ಧ್ವಜ ಹಾಗೂ ಉಗ್ರರ ಫೋಟೋ ಇರೋ ಪೋಸ್ಟರ್‌ನನ್ನು ರಸ್ತೆಗೆ ಅಂಟಿಸಿ, ಚಪ್ಪಲಿ ಹಾಕಿಕೊಂಡೇ ಓಡಾಡಿ, ಧ್ವಜದ ಮೇಲೆ ಮೂತ್ರವಿರ್ಸಜನೆ ಮಾಡಿ ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲೇಬೇಕು ಅಂತಾ ಆಗ್ರಹ ಕೇಳಿಬಂದಿತು.