ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರುತುಮಕೂರು
ಪಾವಗಡ :
ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತ ಹೇಳಲಾಗುತ್ತೇ, ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ, ಇದರಿಂದ ಹಳ್ಳಿ ಹಳ್ಳಿಗಳಲ್ಲೂ ಮೂಲಭೂತ ಸೌಕರ್ಯಗಳನ್ನ ಕೊಡಬೇಕೆಂಬ ಧ್ಯೇಯ ಸರ್ಕಾರಕ್ಕಿದೆ, ಆದರೆ ದುರಂತ ಎಂಬಂತೆ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಗ್ರಾಮ ಪಂಚಾಯತಿ ಆಡಳಿತ ವಿಫಲವಾಗುತ್ತಿದೆ.
ಮೊದಲೇ ಗಡಿ ಪ್ರದೇಶ ಬರದನಾಡು ಅಂತ ಕರೆಸಿಕೊಳ್ಳುವ ಪಾವಗಡದಲ್ಲಿ ಹಳ್ಳಿಗಳ ಶೋಚನೀಯ ಸ್ಥಿತಿ ಹೇಳತೀರದ್ದಾಗಿದೆ, ಸರ್ಕಾರದ ಮಹತ್ವದ ಯೋಜನೆಗಳನ್ನ ಅನುಷ್ಠಾನಕ್ಕೆ ತರುವಲ್ಲಿ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ ಎಂಬುದು ಪ್ರಜಾಶಕ್ತಿ ಟಿವಿಯ ನಮ್ಮ ನಡೆ ನಿಮ್ಮೂರ ಕಡೆ ಅಭಿಯಾನದಲ್ಲಿ ಬಟಾ ಬಯಲಾಗಿದೆ .
ಪಾವಗಡ ತಾಲ್ಲೂಕಿನ ಗಡಿ ಭಾಗಗಳಾದ ರಾಜವಂತಿ, ಕನ್ನಮೇಡಿ ಗ್ರಾಮಪಂಚಾಯತಿಗಳ ಕಡೆ ಪ್ರಜಾಶಕ್ತಿ ಟಿವಿ ಪ್ರಯಾಣ ಬೆಳೆಸಿದಾಗ ರಾಜವಂತಿ ಪಂಚಾಯತಿ ವ್ಯಾಪ್ತಿಯಲ್ಲಿರುವ ಚಿಕ್ಕನಾಯ್ಕನಹಳ್ಳಿ ಗ್ರಾಮದ ಶೋಚನೀಯ ಪರಿಸ್ಥಿತಿ ಕಾಣಿಸುತ್ತದೆ, ಗ್ರಾಮ ಪಂಚಾಯತಿ ನಿರ್ಲಕ್ಷ್ಯಕ್ಕೆ ಪಾವಗಡದ ಹಳ್ಳಿಗಳು ಗಬ್ಬು ನಾರುತ್ತಿವೆ .
ಈ ಊರಿನಲ್ಲಿ ಗುಂಡಿ ಮಯವಾಗಿರುವ ರಸ್ತೆಗಳು ಒಂದು ಕಡೆಯಾದರೆ, ಇಲ್ಲಿಯ ಜನ ವಾಸ ಮಾಡುವ ಊರಿನೊಳಗೂ ರಸ್ತೆ ಮೇಲೆಯೇ ಚರಂಡಿ ಹರಿಯುತ್ತಿದೆ, ಸುಸಜ್ಜಿತವಾದ ಚರಂಡಿ ವ್ಯವಸ್ಥೇ ಮಾಡದೇ ರಸ್ತೆ ಮೇಲೆ ದುರ್ವಾಸನೆ ಬೀರುವ ನೀರು ರಸ್ತೆಯ ಮೇಲೆ ಹರಿದು ಬರುತ್ತಿರುವ ಪರಿಣಾಮ ರೋಗ ರುಜುನಗಳು ಹಳ್ಳಿಗಳ ಜನರನ್ನು ಎಡಬೀಡದೇ ಕಾಡತೊಡಗಿವೆ . ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ .