ಪಾವಗಡ: ಪಾವಗಡದ ಬಾಲಕಿಯರ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ

ಪಾವಗಡ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ
ಪಾವಗಡ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ
ತುಮಕೂರು

ಪಾವಗಡ:

ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಆದರೆ ಬಡ ಮಕ್ಕಳು ಓದುವ ಶಾಲೆಯ ಸರ್ಕಾರಿ ಶಾಲೆಗಳು ಕಾಯಕಲ್ಪವಿಲ್ಲದೇ ಸೊರಗುತ್ತಿವೆ. ಕೆಲವೊಂದು ಭಾಗದಲ್ಲಿ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಂಡು ಶಾಲೆಗಳನ್ನು ಅಭಿವೃದ್ದಿ ಮಾಡ್ತಾರೆ, ಆದರೆ ಅನುದಾನ ವಿಲ್ಲದೇ ಕೆಲ ಶಾಲೆಗಳ ದಹನೀಯ ಸ್ಥಿತಿ ತಲುಪುತ್ತಿವೆ. ಹೌದು ಈಗ ಅಂಥದ್ದೇ ದಹನೀಯ ಸ್ಥಿತಿಗೆ ತುಮಕೂರು ಜಿಲ್ಲೆಯ ಗಡಿ ತಾಲೂಕಾದ ಪಾವಗಡದ ಸರ್ಕಾರಿ ಶಾಲೆ ತಲುಪಿದೆ.

ತುಮಕೂರು ಜಿಲ್ಲೆಯ ಗಡಿ ತಾಲೂಕಾದ ಪಾವಗಡ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ತಾಲೂಕಾಗಿದೆ. ಅನಕ್ಷರತೆ ಅನ್ನೋದು ತಾಂಡವ ಆಡ್ತಿದೆ. ಇದರ ಜೊತೆಗೆ ಸರ್ಕಾರಿ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕವಾಗ್ತಿದೆ. ಹೌದು ಪಾವಗಡದ ಹೃದಯ ಭಾಗದಲ್ಲಿರೋ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠ ಶಾಲೆಯ ಕಟ್ಟಡವನ್ನು ಸುಮಾರು 75 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು, ಈ ಕಟ್ಟಡ ಇಂದು ಶಿಥಿಲಾವಸ್ಥೆಯನ್ನು ತಲುಪಿದೆ. ಬೀಳುವ ಹಂತದಲ್ಲಿರೋ ಈ ಶಾಲಾ ಕಟ್ಟಡದಲ್ಲೇ ಮಕ್ಕಳು ಭೀತಿಯಲ್ಲಿ ವಿದ್ಯಾಭ್ಯಾಸ ಮಾಡುವ ಸ್ಥಿತಿ ಇದೆ.

ಪಾವಗಡ ಪಟ್ಟಣದ ಹೃದಯ ಭಾಗದಲ್ಲಿರೋ ಈ ಒಂದು ಶಾಲಾ ಆವರಣದಲ್ಲಿ ಎರಡು ಅಂಗನವಾಡಿ ಕಟ್ಟಡಗಳು, ಮೌಲಾನಾ ಆಜಾದ್ ಉರ್ದು ಶಾಲೆ ಹಾಗೂ ಬಾಲಕಿಯರ ಕನ್ನಡ ಮಾಧ್ಯಮ ಶಾಲೆ ಇದೆ. ಈ ಶಾಲೆಯಲ್ಲಿ 150 ಮಂದಿ ಮಕ್ಕಳು ವ್ಯಾಸಂಗ ಮಾಡ್ತಾ ಇದ್ದು, ಶಾಲಾ ಮಕ್ಕಳ ಜೀವಕ್ಕೆ ಗ್ಯಾರಂಟಿಯೇ ಇಲ್ಲವಾಗಿದೆ, ಇನ್ನು ಈ ಶಾಲೆಯನ್ನು 1950-1951ರಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ಈ ಶಾಲೆಯಲ್ಲಿರೋ 19 ಕಟ್ಟಡಗಳಲ್ಲಿ ನಾಲ್ಕು- ಐದು ಕಟ್ಟಡಗಳು ಮಾತ್ರ ಚೆನ್ನಾಗಿ ಇವೆ. ಉಳಿದಿರೋ ಎಲ್ಲಾ ಕಟ್ಟಡಗಳು ಹಾಳಾಗಿವೆ. ಬರೋ ಅನುದಾನದಲ್ಲಿ ಶಾಲೆಯನ್ನು ಸುಸ್ಥಿತಿಯಲ್ಲಿ ಇಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಮಗೆ ಶಾಲಾ ಕಟ್ಟಡದ ಅವಶ್ಯತೆ ನಮಗೆ ಇದೆ ಎಂದು ಮುಖ್ಯ ಶಿಕ್ಷಕಿ ಸುಜಾತಾ ಹೇಳಿದರು.

ಇನ್ನು ಈ ಶಾಲೆಯಲ್ಲಿ ಅಸ್ವಚ್ಛತೆಯ ತಾಂಡವ ಆಡ್ತಾ ಇದೆ. ಯಾಕೆಂದರೆ ಕ್ಲೀನ್‌ ಮಾಡಲು ಒಬ್ಬ ಸಿಬ್ಬಂದಿಯನ್ನು ಕೂಡ ನೇಮಿಸಿದ್ದೇವೆ.  ಆದರೆ ಎಷ್ಟೇ ಕ್ಲೀನ್‌ ಮಾಡಿದ್ರು ಸ್ವಚ್ಚ ಆಗ್ತಾ ಇಲ್ಲ ಕಾರಣ ನಿರ್ಮಾಣ ಸರಿಯಾಗಿ ಆಗಿಲ್ಲ. ಸರ್ಕಾರದಿಂದ ಬರುವ ಅನುದಾನದಿಂದ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಿಕೊಡ್ತಾ ಇದ್ದೀವಿ. ಆದರೆ ಕಟ್ಟಡದ ಅವಶ್ಯಕತೆ ಹೆಚ್ಚಾಗಿದ್ದು ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಒದಗಿಸಿಕೊಡಬೇಕೆಂದು ಮುಖ್ಯ ಶಿಕ್ಷಕಿ ಸುಜಾತ ಆಗ್ರಹಿಸಿದರು.

ಅದೇನೆ ಆಗಲಿ, ಇನ್ನಾದರೂ ಕ್ಷೇತ್ರದ ಶಾಸಕರು, ಶಿಕ್ಷಣಾಧಿಕಾರಿ ಇತ್ತ ಗಮನ ಹರಿಸಿ ಶಾಲಾ ಕಟ್ಟಡದ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕಿದೆ.

Author:

...
Editor

ManyaSoft Admin

Ads in Post
share
No Reviews