Pavagada : ಕಸ್ತೂರಿ ಬಾ ಹೆಣ್ಣು ಮಕ್ಕಳ ಶಾಲೆಗಿಲ್ಲ ಮೂಲಸೌಕರ್ಯ

PAVAGADA: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ಕಸ್ತೂರಿ ವಸತಿ ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯಲಾಗಿದೆ. ಪಾವಗಡ ಪಟ್ಟಣದ ಕಸ್ತೂರಿ ಬಾ ಹೆಣ್ಣು ಮಕ್ಕಳ ವಸತಿ ಶಾಲೆಗೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರಿ ವಿರೋಧಿ ಸಂಸ್ಥೆಯ ಮಹಿಳಾ ಘಟಕದಿಂದ  ಭೇಟಿ ನೀಡಿದ್ದು, ವಸತಿ ಶಾಲೆಯಲ್ಲಿ  ಹೆಣ್ಣು ಮಕ್ಕಳಿಗೆ ಆಗ್ತಿರೋ ಸಮಸ್ಯೆಗಳನ್ನು ಆಲಿಸಲಾಯಿತು. ಸರ್ಕಾರದಿಂದ ಮೂಲಸೌಕರ್ಯಗಳನ್ನು ನೀಡಿದರೂ ಕೂಡ ಈ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ.

ಈ ಕಸ್ತೂರಿ ವಸತಿ ಶಾಲೆಯಲ್ಲಿ ಸರಿಯಾದ ಶೌಚಾಲಯ ಇಲ್ಲ, ಮಲಗಲು ಕೋಣೆಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲದೇ ಮಕ್ಕಳು ನೆಲದಲ್ಲೇ ಮಲಗುವ ಸ್ಥಿತಿ ಇದೆ. ಅಲ್ಲದೇ ಮಕ್ಕಳಿಗೆ ತಲೆದಿಂಬು ಕೂಡ ಇಲ್ಲದಿರೋದು ಕಂಡು ಬಂದಿದೆ. ಸಾಲದಕ್ಕೆ ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರೋದು ಕಂಡು ಶಾಲೆಗೆ ಭೇಟಿ ಕೊಟ್ಟ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರಿ ವಿರೋಧಿ ಸಂಸ್ಥೆಯ ಮಹಿಳಾ ಘಟಕದ ಸದಸ್ಯರೇ ತಬ್ಬಿಬ್ಬಾಗಿದ್ದಾರೆ.

ಸುಮಾರು ಒಂದು ಕೊಠಡಿಯಲ್ಲೇ 50 ರಿಂದ 60 ಮಕ್ಕಳು ಮಲಗುವ ದುಸ್ಥಿತಿ ಇದ್ದು, ಕೂಡಲೇ ಈ ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲೂಕ ಅಧ್ಯಕ್ಷ  ನಾಗಮಣಿ ಸೂಚನೆ ನೀಡಿದರು.

Author:

...
Sushmitha N

Copy Editor

prajashakthi tv

share
No Reviews