pavagada - ಪಾವಗಡ ತಾಲ್ಲೂಕಿನ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ನಿರಾಹಾರ ದಿಕ್ಷೆ

ಶ್ರೀನಿವಾಸ್‌
ಶ್ರೀನಿವಾಸ್‌
ತುಮಕೂರು

pavagada :

ಗಡಿ ತಾಲೂಕು ಪಾವಗಡದ ಜನತೆಗೆ ಡಾ.ಡಿ.ಎಂ ನಂಜುಡಪ್ಪ ವರದಿ ಪ್ರಕಾರ ತಾಲೂಕಿನ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ, 371 ಜೆ ಅಡಿಯಲ್ಲಿ ವಿಶೇಷ ಪ್ರಧಿಕಾರ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಬೇಕೆಂದು ಶ್ರೀನಿವಾಸ್‌ ಅವರ ನೇತೃತ್ವದಲ್ಲಿ 17-2-2025ರಿಂದ ನಿರಾಹಾರ ದೀಕ್ಷೆ ಕೈಗೊಳ್ಳಲಾಗಿದೆ.

2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ. ಪಾವಗಡಕ್ಕೆ ನೀರಾವರಿ, ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ರಸ್ತೆ ಮತ್ತು ಸಾರಿಗೆ, ಬ್ಯಾಂಕಿಂಗ್ ಸೌಲಭ್ಯ, ಕ್ರೀಡಾಂಗಣ ಮತ್ತು ಇತರ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡುತ್ತಿದ್ದಾರೆ.. ಹೀಗಾಗಿ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹವನ್ನು 2 ದಿನಗಳಿಂದ ನಡೆಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡು ಡಾ. ನಂಜುಂಡಪ್ಪ ವರದಿಯ ಶಿಫಾರಸ್ಸುಗಳಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು.

ಇನ್ನು ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್‌ ವರದರಾಜು ಹಾಗೂ ಎಸ್‌ಐ ವಿಜಯ್‌ ಕುಮಾರ್‌ ಭೇಟಿ ನೀಡಿ, ಶ್ರೀನಿವಾಸ್‌ ಅವರಿಂದ ಮನವಿ ಪತ್ರ ಸ್ವೀಕರಿಸಿದ್ರು. ಬಳಿಕ ಉಪವಾಸ ಸತ್ಯಾಗ್ರಹವನ್ನು ಬಿಡಿ ಬದಲಾಗಿ ಪ್ರತಿಭಟನೆ ಮಾಡಿ.. ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದ್ರು.

Author:

...
Editor

ManyaSoft Admin

Ads in Post
share
No Reviews